ಬೆಳಗಾವಿ : ತಿರಂಗಾ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ ಬೈಲಹೊಂಗಲ ಪ್ರತಿಭೆ ಕಾರ್ತಿಕೆ ಮಂಜುನಾಥ ಸುಣಗಾರ 6 ವರ್ಷದ ಪುಟ್ಟ ಬಾಲಕ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 5.13 ಕಿ ಮಿ ಅನ್ನು 49 ನಿಮಿಷ 15 ಸೆಂಕಡುಗಳ್ಳಲ್ಲಿ ಓಡುವದರ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ಸೇರಿಸಲು ಯತ್ನಿಸಿದ್ದಾನೆ.
ವಿದ್ಯಾರ್ಥಿ ಸಾಧನೆಗೆ ತಿರಂಗಾ ಅಕಾಡೆಮಿ ಮುಖ್ಯಸ್ಥರು ಸುಹಾಸ್ ವಕ್ಕುಂದ, ಪ್ರವೀಣ ವ್ಯಾಪಾರಿ, ಪ್ರೇರಣಾ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಸುಜಾತಾ ಹಿರೇಮಠ ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಪುಟ್ಟ ಬಾಲಕನ ಸಾಧನೆಗೆ ತಂದೆ ಮಂಜುನಾಥ ಸಾಥ್ ನೀಡಿದ್ದಾರೆ. ಮಗನ ಸಾಧನೆಗೆ ತಂದೆ, ತಾಯಿ ಕುಟುಂಬಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.