ಬೆಳಗಾವಿ : ಬೆಳಗಾವಿ ಶಹಾಪುರದ ಹುಲಭತ್ತೆ ಕಾಲೋನಿಯಲ್ಲಿ ಪಾಲಿಕೆಯಿಂದ ರಸ್ತೆ ನಿರ್ಮಾಣವಾಗಿತ್ತು ಭೈರು ಜಾಂಗಳೆ ಮತ್ತು ಬಾಬುರಾವ್ ಜಾಂಗಳೆ ಎಂಬುವವರ 5 ಗುಂಟೆ ಜಮೀನು ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿದ್ದರು,ಈ ಬಗ್ಗೆ ಜಾಂಗಳೆ ಸಹೋದರರಿಗೆ 75 ಲಕ್ಷ ಪರಿಹಾರ ನೀಡಲು ಕೋರ್ಟ್ ಸೂಚನೆ ನೀಡಿತ್ತು ಆದರೆ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ಯಡವಟ್ಟಿನಿಂದಾಗಿ ಕೋರ್ಟ್ ಸೂಚಿಸಿದರು 75 ಲಕ್ಷ ಪರಿಹಾರ ನೀಡಲಿಲ್ಲ.
ಈ ಬಗ್ಗೆ ಆಕ್ರೋಶಗೊಂಡ ನ್ಯಾಯಾಧೀಶರು ಬೆಳಗಾವಿ ಮಹಾನಗರ ಪಾಲಿಕೆಗೆ ಚಾಟಿ ಬಿಸಿದೆ
ಮತ್ತೆ ಹೈಕೋರ್ಟ್ ಕೋರ್ಟ್ ಆದೇಶ ಉಲ್ಲಂಘಿಸಿದಕ್ಕಾಗಿ ಪಾಲಿಕೆ ಕಾರು , ಕಂಪ್ಯೂಟರ್ ಜಪ್ತಿ ಮಾಡಲು ಸೂಚಿಸಿದೆ.75 ಲಕ್ಷ ಪರಿಹಾರ ಕೊಡದ ಹಿನ್ನೆಲೆ ಪಾಲಿಕೆ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ ಕಾರು , ಪಾಲಿಕೆ ಕಂಪ್ಯೂಟರ್ ಜಪ್ತಿಗೆ ಬಂದಿದ್ದ ಸಿಬ್ಬಂದಿ ಬಂದಿದ್ದಾರೆ ಈಬಗ್ಗೆ ವಾಗ್ವಾದ ನಡೆದು ಕಾರು , ಕಂಪ್ಯೂಟರ್ ಜಪ್ತಿಗೆ ಕೋರ್ಟ್ ಸಿಬ್ಬಂದಿಗಳಿಗೆ ಅವಕಾಶ ನೀಡದೆ ಅಬ್ಬೇಪಾರಿಯಾಗಿ ಉತ್ತರನೀಡಿದ್ದಾರೆ.


