Saturday, March 14, 2026
Flats for sale
Homeರಾಜ್ಯಬೆಳಗಾವಿ ; ಹೆಸ್ಕಾಂ ನಿರ್ಲಕ್ಷ್ಯದಿಂದ ಬೈಕ್ ಬೆಂಕಿಗಾಹುತಿ ಪ್ರಾಣಾಪಾಯದಿಂದ ಪಾರಾದ ಬೈಕ ಸವಾರ.

ಬೆಳಗಾವಿ ; ಹೆಸ್ಕಾಂ ನಿರ್ಲಕ್ಷ್ಯದಿಂದ ಬೈಕ್ ಬೆಂಕಿಗಾಹುತಿ ಪ್ರಾಣಾಪಾಯದಿಂದ ಪಾರಾದ ಬೈಕ ಸವಾರ.

ಬೆಳಗಾವಿ ; ಜಿಲ್ಲೆಯ ಖಾನಾಪೂರ ತಾಲೂಕಿನ ದೊಡ್ಡಸೂರು ಗ್ರಾಮದಲ್ಲಿ ಇವತ್ತು ಬೆಳಗ್ಗೆ ಸಾಗರ ನಾರಾಯಣ ಪಾಟೀಲ ಎನ್ನುವ 33 ವಯಸ್ಸಿನ ಯುವಕ ತಮ್ಮ ಹೊಲದ ಕಡೆ ಹೋಗಬೇಕಾದರೆ ದಾರಿಯಲ್ಲಿ ವಿದ್ಯುತ ಕಂಬದಿಂದ ತಂತಿ ಹರಿದು ಬಿದ್ದಿತ್ತು ಅದನ್ನು ಗಮನಿಸದೆ ಯುವಕ ಅದರ ಮೇಲೆ ಬೈಕ್ ಚಲಾಯಿಸಿದ್ದು ವಿದ್ಯುತ್ ಹರಿದ ಕಾರಣ ಬೈಕ್ ಸುಟ್ಟು ಕರಗಲಾದ ಘಟನೆ ನಡೆದಿದೆ.

ಅಷ್ಟರಲ್ಲಿ ಬೈಕಗೆ ಬೆಂಕಿ ತಗುಲಿ ನೋಡ ನೋಡುತ್ತಲೆ ಬೆಂಕಿ ಜೋರಾಗಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ ಈ ಅನಾಹುತದಿಂದ ಅದೃಷ್ಟವಶಾತ್ ಸಾಗರ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಹಾಗೆ ಮನೆಗೆ ಫೋನು ಮಾಡಿ ವಿಷಯ ತಿಳಿಸಿದಾಗ ಅಲ್ಲಿಯೆ ಅಕ್ಕಪಕ್ಕದಲ್ಲಿದ್ದ ಗ್ರಾಮಸ್ಥರು ಗೆಳೆಯರು ಸ್ಥಳಕ್ಕೆ ಹೋಗಿ ಸಾಗರನನ್ನು ತಾಲೂಕ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ತಾಲೂಕಿನಲ್ಲಿ ಹೆಸ್ಕಾಂದಿಂದ ಈ ರೀತಿ ಅನೇಕ ಅಪಾಯಗಳು ಸಂಭವಿಸುತ್ತಿದ್ದರು ಅದಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular