ಬೆಳಗಾವಿ : ಸರಕಾರದ ಗ್ಯಾರಂಟಿ ಯೋಜನೆ ಎಫೆಕ್ಟ್ ನಿಂದಾಗಿ ಒಂದಲ್ಲಾ ಒಂದು ಹೊಡೆದಾಟ ನಡೆಯುತ್ತಾನೆ ಇದೆ. ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದ ಮಹಿಳೆಯರು ಸೀಟ್ ವಿಚಾರಕ್ಕಾಗಿ ಚಪ್ಪಲಿ ಹಿಡಿದು ಪರಸ್ಪರ ಹೊಡೆದಾಟವಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಉತ್ತರ ಕರ್ನಾಟಕ ,ಕಲ್ಯಾಣ ಕರ್ನಾಟಕ ದಲ್ಲಿ ಬಸ್ಸುಗಳ ಕೊರತೆ ಇರುವುದರಿಂದ ಇದೆಲ್ಲಾ ಸರ್ವೇ ಸಾಮಾನ್ಯ ಆದರೆ ಚಪ್ಪಲಿಯಲ್ಲಿ ಹಿಗ್ಗಾ ಮುಗ್ಗ ಹೊಡೆದಾಡಿದ ವಿಡಿಯೋ ಅಂತೂ ವೈರಲ್ ಆಗಿದೆ.ಮಹಿಳೆಯರಿಗೆ ಫ್ರೀ ಬಸ್ ಮಾಡಿದ್ದರಿಂದ ಸೀಟ್ ಎಲ್ಲಾ ಫುಲ್ ಆಗಿದ್ದು ಇಬ್ಬರು ಮಹಿಳೆಯರು ಮೊದಲಿಗೆ ಪರಸ್ಪರ ಬೈದಾಡಿಕೊಂಡಿದ್ದರು. ಬಳಿಕ ಗಲಭೆ ಉದ್ರೇಕಕ್ಕೇರಿದ್ದು ಅನಂತರ ಕೈಕೈ ಮಿಲಾಯಿಸಿ ಚಪ್ಪಲಿಯಲ್ಲಿ ಹೊಡೆದಾಡಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಇರುವ ಆದಿಶಕ್ತಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.