Friday, December 20, 2024
Flats for sale
Homeರಾಜ್ಯಬೆಳಗಾವಿ : ಸಿಟಿ ರವಿ ಬಂಧನ : ಖಾನಾಪುರ ಪೊಲೀಸ್ ಠಾಣೆಯತ್ತ ದೌಡಾಯಿಸಿದ ಬಿಜೆಪಿ ನಾಯಕರು,ಸರಕಾರ...

ಬೆಳಗಾವಿ : ಸಿಟಿ ರವಿ ಬಂಧನ : ಖಾನಾಪುರ ಪೊಲೀಸ್ ಠಾಣೆಯತ್ತ ದೌಡಾಯಿಸಿದ ಬಿಜೆಪಿ ನಾಯಕರು,ಸರಕಾರ – ಪೊಲೀಸರ ವಿರುದ್ಧ ಆಕ್ರೋಶ..!

ಬೆಳಗಾವಿ : ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ ಹಿನ್ನೆಲೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ಹಿನ್ನೆಲೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಿಸಿಕೊಂಡಿರುವ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿದ್ದಾರೆ.​ ಬಲವಂತಾಗಿಯೇ ಪೊಲೀಸರು ಸುವರ್ಣಸೌಧದಿಂದ ಸಿಟಿ ರವಿ ಅವರನ್ನು ಎತ್ತಿಕೊಂಡು ಬಂದು ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.

ಈ ಹಿನ್ನೆಲೆ ಖಾನಾಪುರ ಪೊಲೀಸ್ ಠಾಣೆಯತ್ತ ಬಿಜೆಪಿ ನಾಯಕರು ದೌಡಾಯಿಸಿದ್ದು ಖಾನಾಪುರ ಶಾಸಕ ವಿಠ್ಠಲ್ ಹಲಗೇಕರ್, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿ ಹಲವು ನಾಯಕರ ಆಗಮಿಸಿ ಪೊಲೀಸ್ ಠಾಣೆ ಮುಂಭಾಗದ ಗೇಟ್ ಬಂದ್ ಮಾಡಿದ ಹಿನ್ನೆಲೆ ಪೊಲೀಸರ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಗೇಟ್ ತೆಗೆಯುವಂತೆ ಪೊಲೀಸರ ಮೇಲೆ ಹರಿಹೈದಿದ್ದು ವಿಧಾನಸೌಧದಲ್ಲಿ ಗೂಂಡಾಗಳನ್ನ ಕಳುಹಿಸುತ್ತೀರಿ. ಸಿಟಿ ರವಿ ಎನೂ ರೇಪ್ ಮಾಡಿದಾರಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದು ಸಿಟಿ ರವಿ ಪರ ಘೋಷಣೆ ಕೂಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular