Saturday, March 14, 2026
Flats for sale
Homeರಾಜ್ಯಬೆಳಗಾವಿ ; ಸಾಲ ಮರುಪಾವತಿ ಮಾಡಿಲ್ಲವೆಂದು ಬಾಣಂತಿ ಜೊತೆ ಒಂದೂವರೆ ತಿಂಗಳ ಹಸುಗೂಸು ಸೇರಿ ಕುಟುಂಬವನ್ನೆ...

ಬೆಳಗಾವಿ ; ಸಾಲ ಮರುಪಾವತಿ ಮಾಡಿಲ್ಲವೆಂದು ಬಾಣಂತಿ ಜೊತೆ ಒಂದೂವರೆ ತಿಂಗಳ ಹಸುಗೂಸು ಸೇರಿ ಕುಟುಂಬವನ್ನೆ ಹೊರ ಹಾಕಿದ ಪೋಲಿಸ್ ಹಾಗೂ ಫೈನಾನ್ಸ್ ಕಂಪೆನಿಯ ಸಿಬ್ಬಂದಿ…!

ಬೆಳಗಾವಿ ; ಬೆಳಗಾವಿಯಲ್ಲಿ ಒಂದು ಹೃದಯವಿದ್ರಾಹಕ ಘಟನೆ ನಡೆದಿದ್ದು ಖಾಸಗಿ ಫೈನಾನ್ಸ್ ಕಂಪನಿಯ ಅಮಾನವೀಯ ವರ್ತನೆಯಿಂದ ಬಾಣಂತಿ ಸೇರಿ ಒಂದೂವರೆ ತಿಂಗಳ ಹಸುಗೂಸು ಹಾಗೂ ಕುಟುಂಬವನ್ನು ಮನೆಯಿಂದ ಹೊರ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.

ಮೈಕೊರೆಯುವ ಚಳಿಯಲ್ಲೇ ಕಂದಮ್ಮನನ್ನ ಕರೆದುಕೊಂಡು ಬಾಣಂತಿ‌ ಹೊರಗಡೆ ಮಲಗಿಸಿದ್ದುಮೂರು ಮಕ್ಕಳ ಸಮೇತ ಒಟ್ಟು ಏಳು ಜನರನ್ನು ಫೈನಾನ್ಸ್ ಕಂಎನಿಯ ಸಿಬ್ಬಂದಿಗಳು ಮನೆಯ ಹೊರಕ್ಕೆ ತಳ್ಳಿದ್ದಾರೆ.

ಸಾಲ ಮರು ಪಾವತಿ ಮಾಡಿಲ್ಲ ಎಂದು ಚೆನೈ ಮೂಲದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ‌ ಮನೆಯನ್ನುವ ಸೀಜ್ ಮಾಡಿದ್ದು
ಹೈನುಗಾರಿಕೆಗಾಗಿ ರೈತ ಸೈದಪ್ಪ ಶಂಕ್ರಪ್ಪ ಗದ್ದಾಡಿ ಎರಡೂವರೆ ವರ್ಷದ ಹಿಂದೆ ಚಿಕ್ಕೋಡಿ ಶಾಖೆಯಲ್ಲಿ ೫ ಲಕ್ಷ ಸಾಲ ಪಡೆದಿದ್ದರೆಂದು ಮಾಹಿತಿ ದೊರೆತಿದೆ.

ಸಾಲ ತೆಗೆದುಕೊಂಡ ನಂತರ ಎರಡು ಎಮ್ಮೆಗಳು ಕೂಡ ಸಾವನ್ನಪ್ಪಿದ್ದು
ಇಷ್ಟಾದರೂ ಈ ವರೆಗೂ ಪ್ರತಿ ತಿಂಗಳು 14,390ರೂ ದಂತೆ 27‌ ಕಂತು ಕಟ್ಟಿದ್ದರೆಂದು ರೈತ ತಿಳಿಸಿದ್ದಾರೆ.

ಮಗಳ ಹೆರಿಗೆಗೆ 85 ಸಾವಿರ ಖರ್ಚು ಮಾಡಿದ ಹಿನ್ನೆಲೆ‌ ಮೂರು ತಿಂಗಳಿಂದ ಕಂತು ಕಟ್ಟಿರಲಿಲ್ಲ ಎಂದು ತಿಳಿಸಿದ್ದು ಆದರೆ ಈ ವರೆಗೂ ಕಟ್ಟಿದ್ದ ಹಣವೇ ಕಂಪನಿಗೆ ಮುಟ್ಟಿಲ್ಲ ಐದು ಲಕ್ಷ ಹಣ ಕಟ್ಟುವಂತೆ ಒತ್ತಾಯಿದ್ದಾರೆಂದು ತಿಳಿಸಿದ್ದಾರೆ.

ವಕೀಲರ ಮೂಲಕ ಕಂಪನಿಯಿಂದ ನೋಟಿಸ್ ನೀಡಿ ಮೂಡಲಗಿ ಪೊಲೀಸರ ಜೊತೆ ಮನೆ ಸೀಜ್ ಮಾಡಿದ್ದು ಮನೆಯಿಂದ ಬಾಣಂತಿ ಹಾಗೂ ಮಕ್ಕಳನ್ನ ಹೊರ ಹಾಕಿದ್ದಾರೆ.

ಮೈ ಕೊರೆಯುವ ಚಳಿಯಲ್ಲೇ ಊಟವಿಲ್ಲದೇ ರಾತ್ರಿಯಿಡೀ ಕುಟುಂಬ ಕಳೆದಿದ್ದು ಹಣ ಕಟ್ಟಲು ಸಮಯ ಕೊಡಿ ಅಂದ್ರೂ ಲೆಕ್ಕಿಸದೇ ಫೈನಾನ್ಸ್ ಕಂಪನಿ ಹಾಗೂ ಮೂಡಲಗಿ ಪೊಲೀಸರು ಮನೆಯಿಂದ ಹೊರಕ್ಕೆ ಹಾಕಿದ್ದು ಅಮಾವನೀತೆಯ ಈ ನಡೆಗೆ ಸ್ಥಳೀಯರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular