Friday, December 20, 2024
Flats for sale
Homeರಾಜಕೀಯಬೆಳಗಾವಿ : ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ಗೆ ವೇ* ಎಂಬ ಆಕ್ಷೇಪಾರ್ಹ ಪದ ಬಳಕೆ ಆರೋಪ, ಹೆಬ್ಬಾಳ್ಕರ್‌...

ಬೆಳಗಾವಿ : ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ಗೆ ವೇ* ಎಂಬ ಆಕ್ಷೇಪಾರ್ಹ ಪದ ಬಳಕೆ ಆರೋಪ, ಹೆಬ್ಬಾಳ್ಕರ್‌ ಬೆಂಬಲಿಗರಿಂದ ಸಿ.ಟಿ ರವಿಗೆ ಮುತ್ತಿಗೆ ಹಲ್ಲೆಗೆ ಯತ್ನ..!

ಬೆಳಗಾವಿ : ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ಗೆ ವೇ* ಎಂಬ ಆಕ್ಷೇಪಾರ್ಹ ಪದ ಬಳಕೆ ಆರೋಪದ ಹಿನ್ನೆಲೆ ವಿಧಾನಪರಿಷತ್​ನ ಕಾರಿಡಾರ್​ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನೂರಾರು ಬೆಂಬಲಿಗರು ಘೋಷಣೆ ಕೂಗಿ ಸಿಟಿ ರವಿ ಮೇಲೆ ಮುಗಿಬಿದ್ದಿದ್ದು, ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಕೂಡಲೇ ಮಾರ್ಷಲ್​ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು. ಹೀಗಾಗಿ ಸಿಟಿ ರವಿ ಅಪಾಯದಿಂದ ಪಾರಾಗಿದ್ದಾರೆ.ಇನ್ನು ಪರಿಷತ್ತಿನ ಒಳಗೆ ಬಂದರೆ ಕಾಂಗ್ರೆಸ್ ಸದಸ್ಯರು ನಿನಗೆ ತಾಯಿ, ತಂಗಿ, ಹೆಂಡತಿ ಇಲ್ವೇನೋ ಎಂದು ಬಾಯಿಗೆ ಬಂದಂತೆ ಬೈಯ್ದು ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಪರಿಷತ್ ಸಭಾಂಗಣದ ಒಳಗಿದ್ದರೂ ಸಿ.ಟಿ. ರವಿ ಮಾರ್ಷಲ್‌ಗಳ ಕಾವಲಿನಲ್ಲಿ ನಿಂತುಕೊಂಡಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನದ ಮುಕ್ತಾಯಕ್ಕೂ ಒಂದು ದಿನ ಇರುವ ಮೊದಲು ಭಾರೀ ಹೈಡ್ರಾಮಾ ಶುರುವಾಗಿದೆ. ವಿಧಾನ ಪರಿಷತ್ ಆವರಣದಲ್ಲಿ ಬೆಳಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಅಮಿತ್ ಶಾ ಅವರು ಅಂಬೇಡ್ಕರ್ ವಿಚಾರವಾಗಿ ಮಾತನಾಡಿದ ಬಗ್ಗೆ ಪರ-ವಿರೋಧವಾಗಿ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ. ರವಿ ಅವರಿಗೆ ನೀನು ಕೊಲೆಗಡುಕ ಎಂದು ಹೇಳಿದ್ದಾರೆ. ಆದರೆ, ಈ ವೇಳೆ ಅದನ್ನು ಸಹಿಸಿಕೊಳ್ಳದ ಸಿ.ಟಿ. ರವಿ ನೀನೊಬ್ಬ ಪ್ರಾಸ್ಟಿಟ್ಯೂಟ್ (ವೇ*) ಎಂಬ ಪದವನ್ನು ಬಳಕೆ ಮಾಡಿದ್ದಾರಂತೆ. ಇದನ್ನು ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಕೇಳಿಸಿಕೊಂಡಿಲ್ಲ. ಆದರೆ, ಇತರೆ ಕಾಂಗ್ರೆಸ್ ಸದಸ್ಯರು ಕೇಳಿಸಿಕೊಂಡು ಅವರಿಗೆ ಹೇಳಿದ್ದಾರೆ.

ಇದಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪರಿಷತ್ ಸಭಾಂಗಣದಿಂದ ಅಳುತ್ತಲೇ ಹೊರಗೆ ಹೋಗಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಕೊಠಡಿಗೆ ತೆರಳಿದ್ದ ವೇಳೆ ಲಕ್ಷ್ಮೀ ಹೆಬ್ಬಾಳಕ್ರ್ ಅವರು ದೂರು ನೀಡಿದ್ದಾರೆ. ಆದರೆ, ಇತ್ತ ಸಿ.ಟಿ. ರವಿ ಅವರು ನಾನು ಅಂತಹ ಪದವನ್ನೇ ಬಳಕೆ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಸಭಾಂಗಣದ ವಿಡಿಯೋ ಹಾಗೂ ಆಡಿಯೋ ಪರಿಶೀಲನೆ ಮಾಡುವಂತೆ ಸಭಾಪತಿ ಸೂಚನೆ ನೀಡಿದ್ದಾರೆ. ಇದರ ಇದಾದ ನಂತರ ಮಧ್ಯಾಹ್ನದ ಊಟಕ್ಕೆ ಹೋಗಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ಬೆಂಬಲಿಗರು ಸುವರ್ಣಸೌಧದ ಕಾರಿಡಾರ್​ನಲ್ಲಿ ಸಿ.ವಿ.ರವಿ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಇದರಿಂದ ಭಾರೀ ಹೈಡ್ರಾಮಾಕ್ಕೆ ಸುವರ್ಣಸೌಧದಲ್ಲಿ ಸಾಕ್ಷಿಯಾಗಿದ್ದು , ಗಲಭೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಸುವರ್ಣಸೌಧದ ಎಲ್ಲ ಗೇಟ್​ಗಳನ್ನ ಬಂದ್ ಮಾಡಲಾಗಿದ್ದು ,ಎಲ್ಲಾ ಫ್ಲೋರ್​ಗೂ ಪೊಲೀಸ್​ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಸಿ.ಟಿ ರವಿ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಲಕ್ಷ್ಮಿ ಹೆಬ್ಬಾಳ್ಕರ್‌ ಬೆಂಬಲಿಗರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ರು. ನೂರಾರು ಬೆಂಬಲಿಗರು ಸುವರ್ಣಸೌಧದ ಎದುರು ಜಮಾಯಿಸಿದರು. ಸೌಧದ ಫಸ್ಟ್‌ಫ್ಲೋರ್‌ ಲಾಂಜ್ ಬಳಿ ನಿಂತು ಗಲಾಟೆ ಮಾಡಿದ್ರು. ಸಿ.ಟಿ ರವಿ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೇ ಏಯ್‌, ಆಚೆ ಬಾರೋ, ಧೈರ್ಯವಿದ್ದರೆ ಹೊರಗೆ ಬಾ ಎಂದು ಏಕವಚನದಲ್ಲೇ ಆವಾಜ್‌ ಹಾಕಿದ್ರು. ಈ ವೇಳೆ ಒಂದಿಬ್ಬರು ಹಲ್ಲೆಗೂ ಯತ್ನಿಸಿದ ಪ್ರಸಂಗ ನಡೆಯಿತು. ಇದರಿಂದ ಹೆಬ್ಬಾಳ್ಕರ್‌ ಬೆಂಬಲಿಗರ ವಿರುದ್ಧ ಕೆಂಡಾಮಂಡಲರಾದ ಸಿ.ಟಿ ರವಿ ʻಬಾ.. ಬಾ.. ಹೊಡಿ ಬಾ.., ಅದೇನ್‌ ಮಾಡ್ತಾರೆ ಮಾಡ್ಲಿ ಬಿಡ್ರಿ ಎಂದು ಪ್ರತಿ ಸವಾಲು ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

Most Popular