Friday, March 6, 2026
Flats for sale
Homeರಾಜ್ಯಬೆಳಗಾವಿ : ವರದಕ್ಷಿಣೆ ನೀಡಲು ಬೇಡಿಕೆ,ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ,ವರ ಜೈಲಿಗೆ.

ಬೆಳಗಾವಿ : ವರದಕ್ಷಿಣೆ ನೀಡಲು ಬೇಡಿಕೆ,ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ,ವರ ಜೈಲಿಗೆ.

ಬೆಳಗಾವಿ : ಹೆಣ್ಣು ಹೆತ್ತ ಹೆತ್ತವರಿಗೆ ಗೊತ್ತು ಮಾಡುವೆ ಮಾಡಲು ಎಷ್ಟು ಕಷ್ಟ ಇದೆ ಎಂದು ಆದರೆ ಇಲ್ಲಿ ಕೊನೇ ಕ್ಷಣದಲ್ಲಿ ಮದುವೆಯೊಂದು ಮುರಿದುಬಿದ್ದು ವರ ಹಿಂಡಲಗಾ ಜೈಲುಪಾಲಾದ ವಿಚಿತ್ರ ವಿದ್ಯಮಾನವೊಂದು ಬೆಳಗಾವಿಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಅಷ್ಟಕ್ಕೂ ಮದುವೆ ಮುರಿದು ಬೀಳಲು, ವರ ಜೈಲುಪಾಲಾಗಲು ಕಾರಣವಾಗಿದ್ದು ಮತ್ತೇನೂ ಅಲ್ಲ; ವರದಕ್ಷಿಣೆ ಬೇಡಿಕೆ. ಪಟ್ಟು ಹಿಡಿದು ವರದಕ್ಷಿಣೆ ಬೇಡಿಕೆ ಇಟ್ಟಿದ್ದಕ್ಕೆ ಮದುವೆ ಮುರಿದುಬಿದ್ದ ವಿದ್ಯಮಾನ ಮೂರು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ನಡೆದಿದ್ದೇನು?
ವರದಕ್ಷಿಣೆ ವಿರುದ್ಧ ಎಷ್ಟೋ ಪ್ರಕರಣ ದಾಖಲಾದರು ,ಜಾಗ್ರತಿ ಮೂಡಿಸಿದರು ಜನರು ಅತಿಯಾಸೆಯಿಂದ ಈ ವರದಕ್ಷಿಣೆ ತೆಗೆಯೋದು ಎಲ್ಲರಿಗೆ ತಿಳಿದ ವಿಚಾರ ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಆಯೋಜನೆಯಾಗಿತ್ತು. ಈ ಮದುವೆಯ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ,‌ ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ ನಡೆದಿತ್ತು.

ಆದರೆ, ವರನ ಕಡೆಯವರು 100 ಗ್ರಾಂ ಚಿನ್ನ, 10 ಲಕ್ಷ ರೂಪಾಯಿ ವರದಕ್ಷಿಣೆ ನೀಡಲು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ವಧುವಿನ ಕುಟುಂಬದವರು ಒಪ್ಪದ ಕಾರಣ ಮದುವೆ ಆಗಲು ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ನಿರಾಕರಿಸಿದ್ದ. ಇದರಿಂದ ಬೆಸತ್ತು ವಧುವಿನ ಕುಟುಂಬಸ್ಥರು ಖಾನಾಪುರ ಪೊಲೀಸರಿಗೆ ದೂರು ನೀಡಿದ್ದರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ವಧು ದೂರು ದಾಖಲಾಗಿತ್ತು.

ವಧುವಿನ ಕುಟುಂಬದವರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡಿರುವ ಪೊಲೀಸರು, ವರ ಸಚಿನ್ ಪಾಟೀಲ್​ನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular