Saturday, December 14, 2024
Flats for sale
Homeರಾಜಕೀಯಬೆಳಗಾವಿ : ವಕ್ಫ್ ಆಸ್ತಿ ವಿವಾದ : ಕಾಂಗೆಸ್ ಬಿಜೆಪಿ ನಡುವೆ ಜಟಾಪಟಿ,ಬಿಜೆಪಿ ಸದಸ್ಯರ ಸಭಾತ್ಯಾಗ...

ಬೆಳಗಾವಿ : ವಕ್ಫ್ ಆಸ್ತಿ ವಿವಾದ : ಕಾಂಗೆಸ್ ಬಿಜೆಪಿ ನಡುವೆ ಜಟಾಪಟಿ,ಬಿಜೆಪಿ ಸದಸ್ಯರ ಸಭಾತ್ಯಾಗ ..!

ಬೆಳಗಾವಿ : ವಿಧಾನಸಭೆ : ವಕ್ಫ್ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಬಿಜೆಪಿ ಶಾಸಕರ ಪರ-ವಿರೋಧ ಹೇಳಿಕೆಗಳು ಸದನದಲ್ಲಿ ವಾಗ್ವಾದಕ್ಕೆ ಕಾರಣವಾದವು.

ಕೆಲವು ಸದಸ್ಯರು ವಕ್ಫ್ ಆಸ್ತಿ ಬಗೆಗೆ ಮಾಹಿತಿ ಹೊಂದಿ ಸದನದ ಮುಂದೆ ಪ್ರಸ್ತಾಪಿಸಿದರೆ, ಇನ್ನೂ ಕೆಲ ಸದಸ್ಯರು ಮಾಹಿತಿಯ ಕೊರತೆಯಿಂದ ವಿಷಯ ಪ್ರಸ್ತಾಪಿಸಿದಾಗ ಆಡಳಿತ ಪಕ್ಷ ವಿರೋಧ ವ್ಯಕ್ತಪಡಿಸಿತು. ಜೊತೆಗೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರೂ ಮಾಹಿತಿ ತಿಳಿದುಕೊಂಡು ಮಾತನಾಡಿರಿ. ಕಡತಕ್ಕೆ ತಪ್ಪು ಮಾಹಿತಿ ಹೋಗಬಾರದು ಎಂದು ಬದ್ಧಿಮಾತು ಹೇಳಿದ ಪ್ರಸಂಗ ಕಂಡುಬAದಿತು.

ಬಿಜೆಪಿ ಸದಸ್ಯ ಶರಣು ಸಲಗರ ವಿಷಯ ಪ್ರಸ್ತಾಪಿಸುತ್ತ, ದೇಶದಲ್ಲಿ ಮುಸ್ಲಿಂ ಧರ್ಮ ಹುಟ್ಟಿದ ಇಸ್ವಿಯನ್ನೇ ತಪ್ಪಾಗಿ ಪ್ರಸ್ತಾಪಿಸಿದ್ದಲ್ಲದೇ, ಖುರಾನ್‌ನಲ್ಲಿಯೂ ವಕ್ಫ್ ಬಗೆಗೆ ಪ್ರಸ್ತಾಪವಿಲ್ಲ ಎಂದೆಲ್ಲ ಹೇಳಲು ಮುಂದಾದರು. ಮಧ್ಯ ಪ್ರವೇಶಿಸಿದ ಶಾಸಕ ಬಸವರಾಜ ರಾಯರಡ್ಡಿ ಸದನಕ್ಕೆ ಮತ್ತು ಕಡತಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಆಗ ಮಾಹಿತಿ ಪಡೆದು ಮಾತನಾಡಿ ಎಂದು ಸಭಾಧ್ಯಕ್ಷರು ತಿಳವಳಿಕೆ ಹೇಳಿದ ಪ್ರಸಂಗ ನಡೆಯಿತು.

ಇನ್ನು ಶಾಸಕ ಚನ್ನಬಸಪ್ಪ ಮಾತನಾಡಿ, ದೇಶ ವಿಭಜನೆಯಾದ ಸಂದರ್ಭದಲ್ಲಿ ಇಲ್ಲಿಂದ ಪಾಕಿಸ್ತಾನಕ್ಕೆ ಹೋದ ಮುಸ್ಲಿಂರ ಆಸ್ತಿಯನ್ನು ವಕ್ಫ್ ಎಂದು ಮಾಡಲಾಗಿದೆ. ಆದರೆ, ಪಾಕಿಸ್ತಾನದಿಂದ ಬಂದ ಹಿಂದೂಗಳ ಆಸ್ತಿಯನ್ನು ಪಾಕಿಸ್ತಾನ ಸರಕಾರ ತನ್ನ ವಶಕ್ಕೆ ಪಡೆದಿದೆ. ನಮ್ಮ ದೇಶದಲ್ಲಿ ಆಗಲಿಲ್ಲ ಎಂದಾಗ, ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣಭೈರೇಗೌಡ, ಲೋಕಸಭೆಯಲ್ಲಿಯೇ ಇದಕ್ಕಾಗಿ ಕಾಯ್ದೆಯನ್ನು ಹಿಂದೆಯೇ ತಂದಿದೆ. ಅದೆಲ್ಲವೂ ಸರಕಾರದ ಆಸ್ತಿಯೇ ಆಗಿದೆ. ಆದರೆ, ಎಲ್ಲಿಂದಲೋ ಇರುವ ಮಾಹಿತಿಯನ್ನು ಜನತೆಯ ಮುಂದಿಟ್ಟು ದಾರಿ ತಪ್ಪಿಸುವ ಕೆಲಸ
ಮಾಡಬೇಡಿ ಎಂದರು.

ನಂತರ ಸದಸ್ಯ ರಿಜ್ವಾನ್ ಅರ್ಷದ ಮಾತನಾಡಿ, ಬಿಜೆಪಿ ಅಧಿಕಾರದ ಅವಧಿಯಲ್ಲಿಯೇ ಸುಮಾರು ೪ ಸಾವಿರ ಎಕರೆ ಭೂಮಿಯ ರೈತರಿಗೆ ನೋಟಿಸ್ ನೀಡಲಾಗಿದೆ. ಆದರೆ, ಅದನ್ನು ಮುಚ್ಚಿಡುವ ಕೆಲಸ ಆಗುತ್ತಿದೆ ಎಂದು ಹರಿಹಾಯ್ದರೆ, ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿ ಕೇವಲ ಸುಳ್ಳು ಮಾತುಗಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸತ್ಯದ ಸಂಗತಿಯನ್ನು ಜನತೆಯ ಮುಂದಿಡಬೇಕು ಎAದರು. ಉಳಿದಂತೆ ಶಾಸಕರಾದ ಶಿವಲಿಂಗೇಗೌಡ, ಭರತ ಶೆಟ್ಟಿ ಸದನದಲ್ಲಿ ವಿಷಯ ಪ್ರಸ್ತಾಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular