Tuesday, March 3, 2026
Flats for sale
Homeರಾಜ್ಯಬೆಳಗಾವಿ : ಲೋಕ ಅದಾಲತನಲ್ಲಿ ಒಂದಾದ ಪತಿ, ಸತಿ.

ಬೆಳಗಾವಿ : ಲೋಕ ಅದಾಲತನಲ್ಲಿ ಒಂದಾದ ಪತಿ, ಸತಿ.

ಬೆಳಗಾವಿ : ಬೈಲಹೊಂಗಲ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನಡೆದ ಬೃಹತ್ ಲೋಕ ಅದಾಲತನಲ್ಲಿ ಹಲವಾರು ಪ್ರಕರಣಗಳು ರಾಜಿಗೊಂಡು ಅದರಲ್ಲಿ ವಿಶೇಷ ಒಂದು ವೈವಾಹಿಕ ಹಕ್ಕುಗಳ ಪುನರ್ ಸ್ವಾಧಿನತೆಗಾಗಿ (ತನ್ನೊಂದಿಗೆ ಬಾಳ್ವೆ ನಡೆಸುವಂತೆ ಪತ್ನಿಗೆ ಆದೇಶಿಸುವಂತೆ) ಅರ್ಜಿಗಾಗಿ ಸಲ್ಲಿಸಿದ ಪ್ರಕರಣವೊದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿತು.

ಹಿರಿಯ ದಿವಾಣಿ ನ್ಯಾಯಧೀಶೆ ಉಷಾರಾಣಿ ಆರ್. ನೇತೃತ್ವದಲ್ಲಿ ನಡೆದ ಲೋಕ ಆದಾಲತನಲ್ಲಿ ಪತಿ, ಪತ್ನಿ ಕೂಡಿ ಬಾಳುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿ ಪರಸ್ಪರ ಅವರಿಗೆ ಹೂ ಮಾಲೆ ಹಾಕಿಸಿ, ಸಿಹಿ ತಿನ್ನಿಸಿ ಒಂದೂಗೂಡಿಸಿದ್ದಾರೆ.

ಅರ್ಜಿದಾರ ಪರ ವಕೀಲ ಆನಂದ ತುರಮರಿ, ಎದುರುಗಾರ ಪರ ಶ್ರೀಧರ ಪಾಟೀಲ ವಕಾಲತ್ತು ವಹಿಸಿದ್ದರು. ವಕೀಲರು, ಕಕ್ಷಿದಾರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular