ಬೆಳಗಾವಿ : ಪುತ್ರಿಯ ಪ್ರೀತಿಯನ್ನು ವಿರೋಧಿಸಿದ್ದಕ್ಕೆ ತಾಯಿ, ಮಗನ ಬರ್ಬರ್ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಆರೋಪಿ ರವಿ
ಪುತ್ರಿಯ ಪ್ರೀತಿ ವಿರೋಧಿಸಿದ್ದಕ್ಕೆ ಪ್ರಿಯತಮೆಯ ಮನೆಗೆ ನುಗ್ಗಿ ತಾಯಿ, ಮಗನ ಮೇಲೆ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಮಾಡಿದ್ದಾನೆ. ಮೃತರನ್ನು ಅಕ್ಕೋಳ ಗ್ರಾಮದ ನಿವಾಸಿ ಮಂಗಲ್ ನಾಯಕ (೪೫), ಪುತ್ರ ಪ್ರಜಲ್ ನಾಯಕ (೧೮) ಕೊಲೆಯಾದ ಮೃತ ದುರ್ದೈವಿಗಳು.
ಮಂಗಲ್ ಪುತ್ರಿ ಪ್ರಾಜಕ್ತಾ ಮತ್ತು ರವಿ ಇಬ್ಬರೂ ಪ್ರೀತಿಸುತ್ತಿದ್ದು,ಪ್ರಾಜಕ್ತಾ ರವಿ ಒಂದು ಸಮುದಾಯದಕ್ಕೆ ಸೇರಿದ್ದರೂ ಲವ್ ಮ್ಯಾರೇಜ್ ಗೆ ತಾಯಿ ವಿರೋಧಿಸಿದ್ದರು. ಮದುವೆ ನಿರಾಕರಿಸಿದ್ದಕ್ಕೆ ನಿನ್ನೆ ರಾತ್ರಿ ಮನೆ ಬಂದ ರವಿಯಿಂದ ಯುವತಿಯ ತಾಯಿ ಹಾಗೂ ತಮ್ಮನನ್ನು ಕೊಚ್ಚಿಕೊಂದಿದ್ದಾನೆ.
ಸಧ್ಯ ಆರೋಪಿ ರವಿ ಮತ್ತು ಪ್ರೇಯಸಿ ಪ್ರಾಜಕ್ತಾರನ್ನು ಪೊಲೀಸರು ವಶಕ್ಕೆ ಪಡೆಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಿಪ್ಪಾಣಿ ಆಸ್ಪತ್ರೆ ರವಾನಿಸಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.