ಬೆಳಗಾವಿ : ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಸಂಭವಿಸಿದ್ದು ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ ಹರಿದು ಮೂರು ಜನ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ನಲ್ಲಿ ನಡೆದಿದೆ
ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಕಾರ್ಮಿಕರು ರಸ್ತೆ ರಿಪೇರಿ ಮಾಡುತ್ತಿದ್ದ
ವೇಳೆ ಏಕಾಏಕಿ ಮೈ ಮೇಲೆ ಟ್ಯಾಂಕರ್ ಹರಿದ ಟ್ಯಾಂಕರ್ ಮೂರು ಜನ ಸಾವನಪ್ಪಿದ್ದು ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಸ್ಥಳದಲ್ಲಿದ್ದ ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿದೆ.
ಸ್ಥಳದಲ್ಲಿ ಇನ್ನೂಳಿದ ಕಾರ್ಮಿಕರ ಆಕ್ರಂದನ ಮುಗಿಲು ಮುಟ್ಟಿದ್ದು
ಕಲಬುರಗಿ ಜಿಲ್ಲೆಯಿಂದ ಕೆಲಸಕ್ಕೆಂದು ಈಕಾರ್ಮಿಕರು ಬೆಳಗಾವಿಗೆ ಬಂದಿದ್ದಾರೆಂದು ತಿಳಿದಿದೆ.ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.