ಬೆಳಗಾವಿ : ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಳ ಸಾವನಪ್ಪಿದೆ. ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದಲ್ಲಿ ಇರೋ ಮೃಗಾಲಯದಲ್ಲಿ ನಡೆದಿದೆ.

ನವೆಂಬರ್ 13 ರಂದು ಮೊದಲು 8 ಕೃಷ್ಣಮೃಗಳ ಸಾವನಪ್ಪಿದ್ದು ಇಂದು ಮತ್ತೆ 20 ಕೃಷ್ಣಮೃಗಳ ಸಾವನಪ್ಪಿದೆ.13 ರಂದು ಸಾವನ್ನಪ್ಪಿದ್ದ ಕೃಷ್ಣಮೃಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು ಸ್ಯಾಂಪಲ್ ಸಂಗ್ರಹಿಸಿ ಮೈಸೂರಿನ ಲ್ಯಾಬ್ ಗೆ ರವಾನಿಸಲಾಗಿದೆ.
ಲ್ಯಾಬ್ ನಿಂದ ವರದಿ ಬರೋ ಮುನ್ನವೇ ಮತ್ತೆ 20 ಕೃಷ್ಣಮೃಗಳ ಸಾವನಪ್ಪಿದ್ದು
ಮಾರಣಾಂತಿಕ ಬ್ರ್ಯಾಕ್ಟೇರಿಯಾದಿಂದ ಮೃತಪಟ್ಟ ಬಗ್ಗೆ ಸಂಶಯ ವೈದ್ಯರು ವ್ಯಕ್ತಪಡಿಸಿದ್ದಾರೆ.
ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಳಲ್ಲಿ 28 ಸಾವನಪ್ಪಿದ್ದು ಮೃಗಾಲಯಕ್ಕೆ ಬೆಳಗಾವಿ ಎಸಿಎಫ್ ನಾಗರಾಜ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನಿಂದ ವೈದ್ಯರ ತಂಡವನ್ನು ಅಧಿಕಾರಿಗಳು ಕರೆಸುತ್ತಿದ್ದು ಬೆಳಗಾವಿ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.


