Friday, November 22, 2024
Flats for sale
Homeರಾಜ್ಯಬೆಳಗಾವಿ : ಹೆತ್ತ ಮೂವರು ಮಕ್ಕಳನ್ನು ಬೀದಿಪಾಲು ಮಾಡಿ 25 ವರ್ಷದ ಯುವಕನ ಜೊತೆ ಪರಾರಿಯಾದ...

ಬೆಳಗಾವಿ : ಹೆತ್ತ ಮೂವರು ಮಕ್ಕಳನ್ನು ಬೀದಿಪಾಲು ಮಾಡಿ 25 ವರ್ಷದ ಯುವಕನ ಜೊತೆ ಪರಾರಿಯಾದ ತಾಯಿ.!

ಬೆಳಗಾವಿ : ತಾಯಿಯೇ ದೇವರು ಎನ್ನುತ್ತಾರೆ ,ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂದು ಇನ್ನು ಅನೇಕ ಗಾದೆ ಮಾತುಗಳನ್ನು ಕೇಳುತ್ತೇವೆ ಆದ್ರೆ ಇಲ್ಲಿ ಒಬ್ಬಳು ಹೆತ್ತ ಮೂವರು ಮಕ್ಕಳನ್ನು ಅರ್ಧ ದಾರಿಯಲ್ಲಿ ಬಿಟ್ಟು 25 ವರ್ಷದ ಯುವಕನ ಜೊತೆ ಪರಾರಿಯಾದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ಬೆಳಕಿಗೆ ಬಂದಿದೆ.

ತಾಯಿ ಮನೆಬಿಟ್ಟು ಪರಾರಿಯಾದ ಹಿನ್ನೆಲೆ ಸದ್ಯ ತಾಯಿಯಿಂದಾಗಿ ಮೂರು ಮಕ್ಕಳು ಬೀದಿಗೆ ಬಂದಿದ್ದು, ನ್ಯಾಯ ಕೊಡಿಸುವಂತೆ ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.ತಾಯಿಗಾಗಿ ಬೆಳಗಾವಿ ಕ್ಯಾಂಪ್‌ ಪೊಲೀಸರಿಗೆ ಮಕ್ಕಳು ದೂರು ನೀಡಿದ್ದಾರೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಗೆ ಮಹಿಳೆ ನೆಲೆಸಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ತಂದೆಯ ಅಕಾಲಿಕ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ತಾಯಿ ನೌಕರಿ ಗಿಟ್ಟಿಸಿಕೊಂಡಿದ್ದಳು. ತಂದೆ ತೀರಿ ಹೋದ ಬಳಿಕ ತಾಯಿಯ ಆಶ್ರಯದಲ್ಲಿದ್ದ ಎಲ್ಲಾ ಮೂವರು ಮಕ್ಕಳೀಗ ಬೀದಿಗೆ ಬಿದ್ದಿದ್ದಾರೆ.

ಏನು ತಿಳಿಯದ ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ತಾಯಿ ಬೇರೊಬ್ಬನ ಜೊತೆಗೆ ನೆಲೆಸಿರುವ ವಿಚಾರ ಗೊತ್ತಾಗಿದೆ. ಆತನ ಬಿಟ್ಟು ತಮ್ಮ ಜೊತೆಗೆ ಬರುವಂತೆ ಹಲವು ಬಾರಿ ಮಕ್ಕಳು ಮನವಿ ಮಾಡಿಕೊಂಡಿದ್ದಾರೆ. ನಿಮ್ಮೊಈ ಹಿನ್ನೆಲೆಯಲ್ಲಿ ಮೂವರು ಗಂಡು ಮಕ್ಕಳು ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ತಾಯಿ ಮಾತ್ರ ಯಾವುದೇ ಕಾರಣಕ್ಕೂ ತಾನು ಮಕ್ಕಳೊಂದಿಗೆ ಹೋಗೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ಕ್ರಮವೇನು ಅನ್ನೋದೇ ಪೊಲೀಸರಿಗೆ ತಲೆಬಿಸಿಯಾಗಿದೆ.

ತಾಯಿ ವಾಪಾಸ್​ ಬಂದರೆ ತಾವೇ ಶಾಲೆ, ಕಾಲೇಜು ಬಿಟ್ಟು ಕೆಲಸಕ್ಕೆ ಹೋಗಿ ಸಾಕುತ್ತೇವೆ ಅಂತ ಮಕ್ಕಳು ಹೇಳಿದ್ದಾರೆ. ಈ ಕುರಿತು ತಾಯಿಯನ್ನ ಮಾಧ್ಯದವರ ಪ್ರಶ್ನಿಸಿದ್ರೆ ರೋಷಾವೇಶ ತೋರಿಸುತ್ತಿದ್ದು, ಇದು ನಮ್ಮ ವೈಯಕ್ತಿಕ ವಿಚಾರ ನೀವ್ಯಾರು ಹೇಳುತ್ತಿದ್ದಾಳೆ.ಸದ್ಯ ಇದೇ ವಿನಾಯಕನ ಮೋಹದ ಬಲೆಗೆ ಮೂರು ಮಕ್ಕಳ ತಾಯಿ ಸಿಲುಕಿಕೊಂಡಿದ್ದಾಳೆ. ತಾಯಿಗಾಗಿ ಮೂವರು ಮಕ್ಕಳು ಹಾಗೂ ಅಜ್ಜಿ ಪರಿತಪಿಸುತ್ತಿದ್ದಾರೆ. ಆದರೆ ಹೆತ್ತ ತಾಯಿಗೆ ಮಕ್ಕಳ ಕೂಗು ಕೇಳಿಸುತ್ತಿಲ್ಲ ಅನ್ನೋದೇ ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

Most Popular