ಬೆಳಗಾವಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನನ್ನ ನಡುವೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಖಡಾಖಂಡಿತವಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಅಥವಾ ಡಿಸಿಎಂ ಆಗುತ್ತಾರೆ ಎನ್ನುವ ವಿಚಾರಕ್ಕೆಸಂಬಂಧಿಸಿದಂತೆ ಈ ರೀತಿ ಉತ್ತರ ನೀಡಿದರು. ಸದ್ಯಕ್ಕೆ ಅಂತಹ ಚರ್ಚೆ ಏನೂ ನಡೆದಿಲ್ಲ. ಸಂಘಟನೆ ಹಿನ್ನೆಲೆಯಲ್ಲಿ ಡಿಕೆಶಿ ನಮ್ಮ ಮನೆಗೆ ಬಂದಿರುತ್ತಾರೆ. ಇನ್ನು ಡಿ.ಕೆ. ಸುರೇಶ್ ಅವರೂ ಸಹ ಬತಿರ್ತಾರೆ. ಈಗ ಎಲ್ಲರೂ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ಯಾರಿಗೆ ಏನ್ ಮಾಡಬೇಕು ಅನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಚುನಾವಣೆ ಮುಗಿದ ಮೇಲೆ ಏನಾಗುತ್ತದೆ ನೋಡಬೇಕು ಎಂದರು.ಸಿಎಂ ಬದಲಾವಣೆಯಾದರೆ ಯಾರಿಗೆ ಕೊಡಬೇಕು ಎನ್ನುವುದು ಪಕ್ಷದ ತೀರ್ಮಾನ. ವಾಲ್ಮೀಕಿ ಸಮುದಾಯದವರಿಗೆ ಕೊಡಬೇಕು ಅನ್ನೋ ವಿಚಾರ ಸದ್ಯಕ್ಕೆ ಪ್ರಸ್ತಾಪವಾಗಿಲ್ಲ. ಇನ್ನು ಸಮುದಾಯವರು ಕೇಳುತ್ತಿದ್ದಾರೆ. ಆದರೂ ಪಕ್ಷದ ತೀರ್ಮಾನ ಅಂತಿಮ ಎಂದರು.


