ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಗರಣಗಳದ್ದೇ ಸಡ್ಡು ಕೇಳಿಸುತಿದ್ದು ಬೆಳಗಾವಿಯಿಂದ ಪ್ರಭಾವಿ ಸಚಿವರ ಭೂ ಕಬಳಿಕೆ ಬಗ್ಗೆ ಬಿಜೆಪಿಯಿಂದ ಈಗಾಗಲೇ ಶೇಕಡಾ ಎಪ್ಪತ್ತರಷ್ಟು ದಾಖಲೆ ಸಂಗ್ರಹಿಸಿದ್ದಾರೆ. ಇರೋ ಇಬ್ಬರು ಸಚಿವರ ಪೈಕಿ ಯಾರ ವಿರುದ್ಧ ಸಿಡಿಯಲಿದೆ ಬಾಂಬ್ ಎಂಬುದು ನೋಡಬೇಕಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇದ್ದು
ಈ ಇಬ್ಬರು ನಾಯಕರ ಪೈಕಿ ಒಬ್ಬರ ವಿರುದ್ಧ ಭೂಮಿ ಕಬಳಿಕೆ ದಾಖಲೆ ಬಿಡುಗಡೆ ಮಾಡುತ್ತಾರೆಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಪಿ.ರಾಜೀವ್ ರಿಂದ ಸಂಗ್ರಹದ ಕುರಿತು ಮಾಹಿತಿ ನೀಡಿದ್ದಾರೆ.ಶೇಕಡಾ 70ರಷ್ಟು ದಾಖಲೆ ಸಂಗ್ರಹವಾಗಿದ್ದು ಪೂರ್ತಿ ದಾಖಲೆ ಸಿಕ್ಕ ಬಳಿಕ ಬಿಡುಗಡೆ ಮಾಡ್ತೇನಿ ಎಂದ ರಾಜೀವ್ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯವರ ಆರೋಪ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಪಾಳಯದಲ್ಲಿ ತಳಮಳಗೊಂಡಿದೆ ಎಂದು ಮಾಹಿತಿ ದೊರೆತಿದೆ.


