ಬೆಳಗಾವಿ : ಈ ಪ್ರಪಂಚದಲ್ಲಿ ಏನೆಲ್ಲ ಅನ್ಯಾಯ ನಡೆಯುತ್ತಾಇದೆ ಎಂದರೆ ಮಾನವನ ಜನ್ಮಕ್ಕೆ ಬೆಲೆಯಿಲ್ಲದಂತಾಗಿದೆ.ಬೈಕ್ ಅಪಘಾತದಲ್ಲಿ ಪತ್ನಿ ಸತ್ತು ಹೋದಳು ಎಂದು ಪೊಲೀಸರಿಗೆ ದೂರು ನೀಡಿ ಗಂಡನೇ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.
ಐದು ವರ್ಷದ ಹಿಂದೆ ಮದುವೆಯಾಗಿದ್ದು ಆದರೆ ಮಕ್ಕಳಾಗಿರಲಿಲ್ಲ. ಇದೇ ಕಾರಣಕ್ಕೆ ಗಂಡ ಬೇರೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡು ಆಕೆಯನ್ನು ಗರ್ಭಿಣಿ ಮಾಡಿ ಮನೆಗೆ ಕರೆತಂದಿದ್ದು. ಇದನ್ನ ಪ್ರಶ್ನಿಸಿದಕ್ಕೆ ಹೆಂಡತಿಯನ್ನು ಅಪ್ಪ -ಅಮ್ಮನ ಜೊತೆ ಸೇರಿ ಮಗ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಪತ್ನಿಯ ಕತ್ತು ಹಿಡಿದು ಆಕೆಯ ಕತ್ತಿಗೆ ಸೀರೆ ಸೆರಗಿನಿಂದ ಬಲವಾಗಿ ಅತ್ತೆ-ಮಾವ ಬಿಗಿದು ಉಸಿರುಗಟ್ಟಿಸಿ ಆಕೆಯನ್ನ ಕೊಂದು ಹಾಕಿದ ಘಟನೆ ಪೊಲೀಸರು ತನಿಖೆ ವೇಳೆ ತಿಳಿದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲ್ಲಬಾದ್ ಗ್ರಾಮದ ಸಂತೋಷ್ ಹೊನಕುಂಡೆ ಪತ್ನಿಯನ್ನು ಅಪ್ಪ ಕಾಮಣ್ಣ, ತಾಯಿ ಜಯಶ್ರೀ ಜೊತೆ ಕೊಂದ ಆರೋಪಿಗಳೆಂದು ತಿಳಿದಿದೆ. ಜೊತೆಯಲ್ಲಿ ಮೃತಪಟ್ಟ ಮಹಿಳೆ ರೇಣುಕಾ ಎಂದು ತಿಳಿದಿದೆ. ಪತ್ನಿ ರೇಣುಕಾಗೆ ಮೂರ್ಛೆ ರೋಗ ಜೊತೆಗೆ ಆಕೆಗೆ ಮಕ್ಕಳು ಕೂಡ ಆಗುತ್ತಿಲ್ಲವೆನ್ನುವುದು ಸಂತೋಷ್ ಇಳಿದಿದ್ದು ತಾನೂ ದೂರದ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮಹಿಳೆ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದನು.ಇತ್ತ ರೇಣುಕಾಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಶುರು ಮಾಡಿದ್ದೂ ಇದಕ್ಕೆ ಸಂತೋಷ್ ತಂದೆ-ತಾಯಿ ಕೂಡ ಸಾಥ್ ನೀಡುತ್ತಾರೆ. ಅನೈತಿಕ ಸಂಬಂಧ ಇಟ್ಟುಕೊಂಡಾಕೆಯನ್ನ ಮದುವೆಯಾಗಿದ್ದೇನೆ ಅಂತಾ ಮನೆಗೂ ಈತ ಕರೆದುಕೊಂಡು ಬಂದಿದ್ದು ಜೊತೆಗೆ ಆಕೆ ಗರ್ಭಿಣಿಯಾಗಿದ್ದಾಳೆ ಅನ್ನೋದನ್ನ ಕೂಡ ಹೇಳುತ್ತಾನೆ. ಇದರಿಂದ ಸಂತೋಷ್ ತಂದೆ-ತಾಯಿ ಖುಷಿ ಪಟ್ಟಿದ್ದು ಇತ್ತ ರೇಣುಕಾ ಮಾತ್ರ ಸಾಕಷ್ಟು ನೊಂದುಕೊಳ್ಳುತ್ತಾಳೆ. ಎರಡನೇಯವಳು ಮನೆಗೆ ಬಂದ ಮೇಲೆ ರೇಣುಕಾಗೆ ಬಹಳಷ್ಟು ಕಿರುಕುಳ ನೀಡುತ್ತಾರೆ. ಹೇಗಾದರೂ ಮಾಡಿ ಆಕೆಯನ್ನ ಮನೆ ಬಿಟ್ಟು ಕಳುಹಿಸಬೇಕು ಅಂತಾ ಪ್ರಯತ್ನ ಮಾಡ್ತಾರೆ. ಆದರೆ ಎಲ್ಲವನ್ನು ಸಹಿಸಿಕೊಂಡು ರೇಣುಕಾ ಮನೆ ಬಿಟ್ಟು ಹೋಗಲ್ಲ ಅಂತಾ ಗೊತ್ತಾಗುತ್ತಿದ್ದಂತೆ ಕೊಲೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ರೇಣುಕಾಳ ಕತ್ತು ಹಿಡಿದು ಆಕೆಯ ಕತ್ತಿಗೆ ಸೀರೆ ಸೆರಗಿನಿಂದ ಬಲವಾಗಿ ಅತ್ತೆ-ಮಾವ ಬಿಗಿದು ಉಸಿರುಗಟ್ಟಿಸಿ ಆಕೆಯನ್ನ ಕೊಂದು ಹಾಕಿದ್ದಾರೆ. ಇದಾದ ಬಳಿಕ ಇಬ್ಬರು ಸೇರಿಕೊಂಡು ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಮತ್ತೊಂದು ಭಾಗವನ್ನ ಬೈಕ್ ಗೆ ಕಟ್ಟಿ ಆಕೆಯ ಶವವನ್ನ ಸುಮಾರು ನೂರು ಇನ್ನೂರು ಮೀಟರ್ ನಷ್ಟು ಬೈಕ್ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಇಲ್ಲಿ ಅಪಘಾತವಾಗಿ ಆಕೆ ಸತ್ತಳು ಅನ್ನೋದನ್ನ ಬಿಂಬಿಸುವ ಕೆಲಸ ಅತ್ತೆ-ಮಾವ ಮಾಡುತ್ತಾರೆ.ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವರದಿಯಲ್ಲಿ ತಿಳಿದಿದ್ದು ಪೊಲೀಸರು ಪತಿಯನ್ನು ತನಿಖೆಗೆ ಒಳಪಡಿಸಿದಾಗ ಬಾಯಿಬಿಟ್ಟಿದ್ದಾನೆ.