Saturday, March 7, 2026
Flats for sale
Homeರಾಜ್ಯಬೆಳಗಾವಿ : ಭಾರಿ ಮಳೆಗೆ ತುಂಬಿ ಹರಿದ ಹಳ್ಳ, ಜೆಸಿಬಿ ಏರಿ ಹಳ್ಳ ದಾಟಿದ ಶಾಲಾ...

ಬೆಳಗಾವಿ : ಭಾರಿ ಮಳೆಗೆ ತುಂಬಿ ಹರಿದ ಹಳ್ಳ, ಜೆಸಿಬಿ ಏರಿ ಹಳ್ಳ ದಾಟಿದ ಶಾಲಾ ಮಕ್ಕಳು..!

ಬೆಳಗಾವಿ : ಕಳೆದ ಹಲವು ದಿನಗಳಿಂದ ಸುರಿಯುವ ಬಾರಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದೆ. ಬೆಳಗಾವಿಯಲ್ಲಿ ಸುರಿದ ಬರಿ ಮಳೆಗೆ ಜೀವ ಭಯದಲ್ಲಿ ಉಪ್ಪಾರಟ್ಟಿ ಗ್ರಾಮದ ಶಾಲಾ ಮಕ್ಕಳ ಹಳ್ಳ ದಾಟಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ತುಂಬಿ ಹಳ್ಳ ತುಳುಕಿದ್ದು ಹಳ್ಳ ದಾಟಲು ಆಗದೆ ಜೆಸಿಬಿಯಲ್ಲಿ ಮಕ್ಕಳನ್ನು ಕೂರಿಸಿ ಸ್ಥಳೀಯರು ಹಳ್ಳ ದಾಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮ ಮಾಲದಿನ್ನಿ‌ ಗ್ರಾಮದ ಮಧ್ಯೆ ಇರುವ ಸೇತುವೆ ಇದಾಗಿದ್ದು ಮಳೆಬಂದರೆ ಜೆಸಿಬಿಯಲ್ಲಿಯೇ ಹಳ್ಳದ ನೀರಲ್ಲೇ ಜೀವ ಕೈಯಲ್ಲಿ ಹಿಡಿದು ಯುವಕರು ದಾಟಿಸುವಂಥಹ ಪರಿಸ್ಥಿತಿಉಂಟಾಗಿದೆ. ಹಲವು ವಿದ್ಯಾರ್ಥಿಗಳು ಸೇತುವೆ ಮೇಲಕ್ಕೆತ್ತಲು ಹಲವು ಬಾರಿ ಮನವಿ ಮಾಡಿದರೂ ಯಾವದೇ ಪ್ರಯೋಜನವಾಗದೇ ಇರುವುದರಿಂದ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular