Saturday, March 14, 2026
Flats for sale
Homeರಾಜ್ಯಬೆಳಗಾವಿ : ಬೋರವೇಲ್ ನೀರು ಕುಡಿದು 41 ಮಂದಿಗೆ ವಾಂತಿ ಭೇದಿ.

ಬೆಳಗಾವಿ : ಬೋರವೇಲ್ ನೀರು ಕುಡಿದು 41 ಮಂದಿಗೆ ವಾಂತಿ ಭೇದಿ.

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಬೋರವೇಲ್ ನೀರು ಸೇವಿಸಿದ ಊರಿನ 41 ಜನರಲ್ಲಿ ವಾಂತಿ ಭೇದಿಯಾದ ಘಟನೆ ನಡೆದಿದೆ.

ಚಚಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಬರುವ ಕೆಲವು ಮನೆಗಳಲ್ಲಿ ವಾಂತಿ ಭೇದಿಯಾಗಿದ್ದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ 3 ಜನರನ್ನು ಬೈಲಹೊಂಗಲ ತಾಲೂಕಾ ಆಸ್ಪತ್ರೆಗೆ 3 ಜನರನ್ನ ದಾಖಲಿಸಿದ್ದಾರೆ.

ಇನ್ನುಳಿದವರನ್ನು ಚಚಡಿ ಪಿಎಚ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೋರವೇಲ್ ನೀರನ್ನು ಪ್ರಯೋಗಾಲಯಕ್ಕೆ ಆರೋಗ್ಯ ಅಧಿಕಾರಿಗಳು ಕಳುಹಿಸಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಡುಬಿಟ್ಟಿದ್ದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಸರಣಿ ತಪಾಸಣೆ ನಡೆಸಿದ್ದಾರೆ. ಸ್ಥಳಕ್ಕೆ ಡಿಎಚ್ ಓ ಮಹೇಶ ಕೋಣಿ ದೌಡಾಯಿಸಿದ್ದು ಗ್ರಾಮಸ್ಥರ ಜೊತೆಗೆ ತುರ್ತು ಸಭೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular