ಬೆಳಗಾವಿ : ಉತ್ತರ ಕರ್ನಾಟಕದ ಭಾಗದ ಭಕ್ತರ ಆರಾಧ್ಯ ದೈವ ಗೊಡಚಿ ವೀರಭದ್ರೇಶ್ವರ.ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಲ್ಲಿದೆ ಭಾನುವಾರ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ನಿನ್ನೆ ಸಂಜೆ ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ನಡೆಯಿತು . ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿ ನಾನಾ ಕಡೆಗಳಿಂದ ಭಕ್ತರು ಪಾಲ್ಗೊಂಡಿದ್ದು ಎತ್ತಿನ ಗಾಡಿಯ, ಪಾದಯಾತ್ರೆಯ ಮೂಲಕವೂ ಅಪಾರ ಜನಸ್ತೋಮ ಆಗಮಿಸಿದ್ದಾರೆ.
ಗಜರಾಜನ ಮೆರವಣಿಗೆ, ನಂದಿಕೋಲು, ವೀರಗಾಸೆ, ವೀರ ಪುರವಂತರು, ಸಕಲ ವಾದ್ಯ ಮೇಳಗಳೊಂದಿಗೆ ರಥೋತ್ಸವ ಅದ್ದೂರಿಯಾಗಿ ಗೊಡಚಿ ವೀರಭದ್ರೇಶ್ವರ ಮಹಾರಥೋತ್ಸವ ನಡೆಯಿತು.