ಬೆಳಗಾವಿ : ಜೈಲಲ್ಲಿ ದರ್ಶನ್ ಸಿಗರೇಟ್ ಸೇದಿದ ಎಫೆಕ್ಟ್ ನಿಂದಾಗಿ ಇತರ ಖೈದಿಗಳು ಬೀಡಿ,ಸಿಗರೇಟ್ ತಂಬಾಕಿಗಾಗಿ ಡಿಮ್ಯಾಂಡ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಖೈದಿಗಳ ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಬೀಡಿ ಸಿಗರೇಟ್ ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದು ಬೆಳಗಿನ ಉಪಹಾರ ಮಾಡದೆ ಖೈದಿಗಳು ಉಪವಾಸ ವೃತಾಚರಣೆ ಮಾಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ ಅಂಡ್ ಟೀಮ್ ಜಾಲಿ ಮೂಡಿನಲ್ಲಿದ್ದದು ಇನ್ನಿತರ ಕೈದಿಗಳ ಕೆಂಗಣ್ಣಿಗೆ ಕಾರಣವಾಗಿದ್ದು ಇದೀಗ ಬೀಡಿ,ಸಿಗರೇಟ್ ತಂಬಾಕಿಗಾಗಿ ಖೈದಿಗಳ ಪ್ರೊಟೆಸ್ಟ್ ಬೀಡಿ ಸಿಗರೇಟ್ ಕೊಡುವವರೆಗೆ ನಾವು ಉಪಹಾರ ಮಾಡಲ್ಲ ಮಧ್ಯಾಹ್ನ ಊಟವನ್ನೂ ಮಾಡಲ್ಲ ಎಂದು ಪ್ರತಿಭಟನೆಗಿಳಿದಿರುವ ಖೈದಿಗಳು ಬಿಗಿಪಟ್ಟು ಹಿಡಿದಿದ್ದಾರೆ. ಸದ್ಯ ಎನೂ ಮಾಡಲಾಗದ ಪರಿಸ್ಥಿತಿಯಲ್ಲಿರುವ ಜೈಲಧಿಕಾರಿಗಳು ಕೈದಿಗಳ ಈ ಬೇಡಿಕೆಯಿಂದಾಗಿ ತಲೆ ನೋವು ಉಂಟಾಗಿದೆ.