Wednesday, October 22, 2025
Flats for sale
Homeಕ್ರೈಂಬೆಳಗಾವಿ : ಗಂಡನ ಜತೆ ಸೇರಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ..!

ಬೆಳಗಾವಿ : ಗಂಡನ ಜತೆ ಸೇರಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ..!

ಬೆಳಗಾವಿ : ಎರಡು ಮದುವೆಯಾಗಿರುವ ಮಹಿಳೆಯೊಬ್ಬಳು ತನ್ನ ಗಂಡನ ಜತೆ ಸೇರಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಶೋಭಾ ತನ್ನ ಎರಡನೇ ಪತಿ ಮಂಜುನಾಥಯೊಂದಿಗೆ ಬೆಳಗಾವಿಯಲ್ಲಿ ವಾಸವಿದ್ದಾಳೆ. ಈತನ್ಮಧ್ಯೆ ಬೆಂಗಳೂರಿನ ಆನಂದ ಎಂಬ ಯುವಕನ ಜತೆಯಲ್ಲಿ ಪ್ರೇಮದಲ್ಲಿ ಬಿದ್ದಿದ್ದಾಳೆ. ಆತನ ಜತೆ ಚಾಟಿಂಗ್, ಡೇಟಿಂಗ್ ಕೂಡಾ ನಡೆಸಿದ್ದಾಳೆ. ಆದರೆ ಕಳೆದ ೧೫ ದಿನಗಳಿಂದ ಆತನ ಜತೆ ಮಾತಿಗೆ ಸಿಗಲಿಲ್ಲ. ಇದರಿಂದ ಗಾಬರಿಯಾದ ಯುವಕ ನೇರವಾಗಿ ಆಕೆಯ ಭೇಟಿಗೆ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದಾನೆ.

ದಿಢೀರ್ ಶೋಭಾಳ ಮನೆಗೆ ಬಂದ ಅವನಿಗೆ ಶಾಕ್ ಕಾದಿತ್ತು. ಆಕೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಸಿಟ್ಟಿಗೆದ್ದವನು ಶೋಭಾಳನ್ನು ನಿಂದಿಸಿ ಆಕೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಅಷ್ಟರಲ್ಲಿಯೇ ಶೋಭಾ ಮತ್ತು ಆಕೆಯ ಪತಿರಾಯ ಚಾಕುವಿನಿಂದ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಆನಂದ ಬೆಳಗಾವಿ ಬಿಮ್ಸ್ನ ಐಸಿಯುದಲ್ಲಿ ದಾಖಲಾಗಿದ್ದಾರೆ. ಶೋಭಾಳನ್ನು ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕಾಕ ಟೌನ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular