ಬೆಳಗಾವಿ : ಗಂಡ ತಲೆಯ ಮೇಲೆ ಕಾದ ಎಣ್ಣೆ ಸುರಿದು ಹೆಂಡತಿ ಕೊಲೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ರಾಮನಗರದಲ್ಲಿ ನಡೆದಿದೆ.
ರಾಮನಗರದ ನಿವಾಸಿ ವೈಶಾಲಿ ಪಾಟೀಲ್ (48) ಎಂಬ ಮಹಿಳೆ ಕೌರ್ಯ ನಡೆಸಿದ್ದು ಪತಿ ಸುಭಾಷ ಪಾಟೀಲ್(55) ಎಂಬಾತನ ಮೇಲೆ ಕಾದ ಎಣ್ಣೆ ಸುರಿದು ವಿಕೃತಿ ಮೆರೆದಿದ್ದಾಳೆ.
ಗಂಭೀರ ಗಾಯಗೊಂಡ ಸುಭಾಷಗೆ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಿದ್ದು ಸುಡುವ ಕಾದ ಎಣ್ಣೆ ಸುಭಾಷ ತಲೆಯ ಮೇಲೆ ಹಾಕಿದ್ದರಿಂದ 60ರಷ್ಟು ಸುತ್ತಿದ್ದು ಪಾಪಿ ಹೆಂಡತಿ ಕೌರ್ಯಕ್ಕೆ ಗಂಡ ಸುಭಾಷ ಪಾಟೀಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಹೆಂಡತಿ ವೈಶಾಲಿ ಪರಸ್ರ್ತೀಯೊಂದಿಗೆ ಗಂಡನ ಸಂಬಂಧ ಹೊಂದಿದ್ದಾನೆಂದು ಸಂಶಯ ಪಡುತ್ತಿದ್ದು ಇದೇ ಕಾರಣಕ್ಕೆ ಹಲವಾರು ಬಾರಿ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರ ನಡುವೆಯೂ ಗಲಾಟೆ ಉಂಟಾಗಿತ್ತು. ತಲೆಯ ಮೇಲೆ ಎಣ್ಣೆ ಹಾಕಲು ಪತ್ನಿಯ ಸಂಶಯವೇ ಕಾರಣ ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಸುಭಾಷ್ ಗ್ಯಾಸ ಸಪ್ಲೈಯರ ಆಗಿ ಕೆಲಸ ಮಾಡುತ್ತಿದ್ದು ಎಂದಿನಂತೆ ಗ್ಯಾಸ್ ಸಪ್ಲೈ ಕೆಲಸ ಮುಗಿಸಿ ಮನೆಯಲ್ಲಿ ಕುಳಿತಾಗ ಹೆಂಡತಿ ಕಾದ ಎಣ್ಣೆಯನ್ನೇ ತಲೆಯ ಮೇಲೆ ಹಾಕಿದ್ದಾಳೆ. ಗಾಯಗೊಂಡ ಸುಭಾಷನನ್ನು ಸದ್ಯ ಸ್ಥಳೀಯರ ಸಹಾಯದೊಂದಿಗೆ ಬೀಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಬೀಮ್ಸ್ ವೈದ್ಯರ ಸಲಹೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


