ಬೆಳಗಾವಿ ; ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಕೊಲೆ ನಡೆದಿದೆ.ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕನ ಮೇಲೆ ಆಟೋ ಚಾಲಕನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲೇ ಮೃತಪಟ್ಟ ಗೋವಾದ ಮಾಜಿ ಶಾಸಕರನ್ನು ಲಾವೋ ಮಾಮಲೇದಾರ್ (69)ಎಂದು ತಿಳಿದಿದೆ.

ಆಟೋ ಚಾಲಕ ಮುಜಾಹಿದ್ ಸನದಿ..
ಬೆಳಗಾವಿಯ ಖಡೇಬಜಾರ್ ನಲ್ಲಿ ಇರೋ ಶ್ರೀನಿವಾಸ ಲಾಡ್ಜ್ ನಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಲಾವೋ ಮಾಮಲೇದಾರ್ ಎಂದು ತಿಳಿದುಬಂದಿದೆ.
ಖಡೇಬಜಾರ್ ಬಳಿಕ ಆಟೋಗೆ ಮಾಜಿ ಶಾಸಕರ ಕಾರು ಟಚ್ ಹಿನ್ನೆಲೆ ಗಲಭೆ ನಡೆದಿತ್ತು ಬಳಿಕ ಶ್ರೀನಿವಾಸ ಲಾಡ್ಜ್ ಕಡೆಗೆ ಲಾವೋ ಮಾಮಲೇದಾರ್ ಬಂದಿದ್ದು
ಆಗ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಚಾಲಕನ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಮಾರಣಾಂತಿಕ ಹಲ್ಲೆ ನಡೆದ ಸ್ಥಳದಲ್ಲೇ ಲಾವೋ ಮಾಮಲೇದಾರ್ ಮೃತಪಟ್ಟಿದ್ದು ಲಾವೋ ಮಾಮಲೇದಾರ್ ಮೃತ ದೇಹವನ್ನು ಬೆಳಗಾವಿ ಬೀಮ್ಸ್‌ಗೆ ರವಾನಿಸಲಾಗಿದೆ. ತಕ್ಷಣವೇ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು,ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ.