ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಇಂದು ಮುಂಜಾನೆ ನಡೆದ ಕಾಲ್ತುಳಿತದಲ್ಲಿ ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮೇಘಾ ಹತ್ತರವಾಠ್(25) ಸಾವನಪ್ಪಿದ್ದಾರೆಂಬ ಮಾಹಿತಿ ದೊರೆತಿದೆ.
ಲಕ್ಷಾಂತರ ಜನರು ನೆಲೆಸಿದ್ದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು ತಾಯಿ-ಮಗಳು ಸಿಲುಕಿದ್ದಾರೆಂದು ತಿಳಿದುಬಂದಿದೆ. ಬಳಿಕ ಇಂದು ಬೆಳಗ್ಗೆ ಪ್ರಯಾಗ್‌ರಾಜ್‌ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಚಿಕಿತ್ಸೆ ಫಲಕಾರಿ ಆಗದೇ ಬೆಳಗಾವಿಯ ತಾಯಿ ಮಗಳು ಸಾವನ್ನಪ್ಪಿದ್ದಾರೆ.
ಚಿದಂಬರ್ ಎಂಬುವವರು ಅವರ ಜೊತೆಗೆ ಇರುವವರಿಂದ ಮಾಹಿತಿ ಸಿಕ್ಕಿದ್ದು ್ದಾರೆ ಈ ವರೆಗೂ ಸಂಪರ್ಕಕ್ಕೆ ಬಂದಿರಲಿಲ್ಲ. ಇದೀಗ ಮೃತಪಟ್ಟಿದ್ದಾರೆ ಅಂತಾ ಅವರ ಜೊತೆಗೆ ಇದ್ದ ಚಿದಂಬರ ತಿಳಿಸಿದ್ದು ಸಾವು ಖಚಿತ ಪಡಿಸಿದ ಮೇಘಾ ಅವರ ತಂದೆ ದೀಪಕ್ ಮಹತ್ತರವಾದ ಹೇಳಿಕೆ ನೀಡಿದ್ದಾರೆ.
ಇದೀಗ ತಾಯಿ ಮಗಳು ಸಾವನ್ನಪ್ಪಿದ ಬಳಿಕ ಬೆಳಗಾವಿಯ ಮೂಲದ ಇನ್ನು ಇಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಿವಾಜಿನಗರದ ನಿವಾಸಿ ಮಹಾದೇವಿ ಹನುಮಂತ ಬಾವನೂರ ಹಾಗೂ ಬೆಳಗಾವಿ ನಗರದ ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಸಾವನ್ನಪ್ಪಿದ್ದಾರೆ. ಇನ್ನು ಅರುಣ್ ಹೆಂಡತಿ ಕಾಂಚನಾಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರು ಭಾನುವಾರ 30 ಜನರ ಜೊತೆ ಮಹಾ ಕುಂಭಮೇಳಕ್ಕೆ ತೆರಳಿದ್ದರು.