ಬೆಳಗಾವಿ : ಐದು ಕೋಟಿ ಹಣಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಪ್ರಕರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಬಂಧನವಾದ ಘಟನೆ ನಡೆದಿದೆ.
ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ರಾಮಗನಟ್ಟಿಯವರನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಫೆ.14ರಂದು ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ ಕಿಡ್ನಾಪ್ ಆಗಿತ್ತು. ಕಿಡ್ನಾಪ್ ಮಾಡಿ ಆರೋಪಿಗಳು. ಐದು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು,ಕಿಡ್ನಾಪ್ ಪ್ರಕರಣ ದಾಖಲಾದ ೨೪ ಗಂಟೆಯಲ್ಲಿ ಪೊಲೀಸರು ಬಸವರಾಜನನ್ನ ರಕ್ಷಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ತನಿಖೆ ವೇಳೆ ಕಿಡ್ನಾಪ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಕಿಂಗ್ ಪಿನ್ ಮಂಜುಳಾ ಅನ್ನೋ ವಿಚಾರ ಬಹಿರಂಗವಾಗಿದ್ದು ,ಮಂಜುಳಾ ಮಗ ಈಶ್ವರ ರಾಮಗನಟ್ಟಿ ಬಂಧಿಸಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ತಾಯಿ ನೀಡಿದ ಪ್ಲ್ಯಾನ್ ಮೇಲೆ ಮಗ ಹಾಗೂ ಸ್ನೇಹಿತರು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು ತನಿಖೆ ಸಂದರ್ಭದಲ್ಲಿ ತಾಂತ್ರಿಕ ಸಾಕ್ಷಿ ಸೇರಿ ಆರೋಪಿಗಳ ಹೇಳಿಕೆ ಆಧಾರದ ಮೇಲೆ ಮಂಜುಳಾ ಬಂಧಸಿಲಾಗಿದೆ. ಕಿಡ್ನಾಪ್ ಕೇಸ್ ನಲ್ಲಿಒಟ್ಟು ಏಳು ಜನ ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.