ಬೆಂಗಳೂರು ; ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯಾದ್ಯಂತ 8 ಲಕ್ಷ 69 ಸಾವಿರದ 968 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸದ್ಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಣೆ ಮಾಡಿದೆ. ಎಂದಿನಂತೆ ಈ ಬಾರಿಯೂ ಕೂಡ ಹೆಣ್ಣುಮಕ್ಕಳೇ ರಿಸಲ್ಟ್ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ.
ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ಮತ್ತು kseab.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಪರೀಕ್ಷೆ ನಡೆದಿತ್ತು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು 8.69 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.
ಕರ್ನಾಟಕ ಜಿಲ್ಲಾವಾರು 10ನೇ ತರಗತಿ ಫಲಿತಾಂಶ 2024: ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಇನ್ನು ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಯಾದಗಿರಿ (50.59%).ಯಾಗಿದೆ.
ಅಂದಹಾಗೆಯೇ ಈ ಬಾರಿ 2,87,416 (65.90%) ಬಾಲಕರು, 3,43,788 (81.11%) ಬಾಲಕಿಯರು ಪರೀಕ್ಷೆಯಲ್ಲಿ ಉತ್ತೀಣರಾಗಿದ್ದಾರೆ. ಒಟ್ಟು 8.59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2,28,763 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಪರೀಕ್ಷೆ ಫೇಲ್ ಆದವರಿಗೆ ಮೂರು ಬಾರಿ ಪಾಸ್ ಮಾಡಲು ಅವಕಾಶ ನೀಡಲಾಗುತ್ತದೆ.
ಇನ್ನು ಕಳೆದ ವರ್ಷ 8.35102 ಲಕ್ಷ ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಿದ್ದರು. ಅದರಲ್ಲಿ 7,00,619 (83.89) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಜಿಲ್ಲಾವಾರು ಫಲಿತಾಂಶ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ (94%) ಫಲಿತಾಂಶ
ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ (92.12%)
ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ (88.67%)
ಕೊಡಗು ಜಿಲ್ಲೆಗೆ ನಾಲ್ಕನೇ ಸ್ಥಾನ (88.67%)
ಉತ್ತರ ಕನ್ನಡ ಜಿಲ್ಲೆಗೆ ಐದನೇ ಸ್ಥಾನ (86.54%)
ಹಾಸನ ಜಿಲ್ಲೆಗೆ ಆರನೇ ಸ್ಥಾನ (86.28%)
ಮೈಸೂರು ಜಿಲ್ಲೆಗೆ ಏಳನೇ ಸ್ಥಾನ (85.5%)
ಶಿರಸಿ ಜಿಲ್ಲೆಗೆ ಎಂಟನೇ ಸ್ಥಾನ (84.64%)
ಬೆಂಗಳೂರು ಗ್ರಾ ಜಿಲ್ಲೆಗೆ ಒಂಬ್ತತೇ ಸ್ಥಾನ (83.67%)
ಚಿಕ್ಕಮಗಳೂರು ಜಿಲ್ಲೆಗೆ ಹತ್ತನೇ ಸ್ಥಾನ (83.39%)
ವಿಜಯಪುರ ಜಿಲ್ಲೆಗೆ 11ನೇ ಸ್ಥಾನ (79.82%)
ಬೆಂಗಳೂರು ದಕ್ಷಿಣ ಜಿಲ್ಲೆಗೆ 12ನೇ ಸ್ಥಾನ (79%)
ಬಾಗಲಕೋಟೆ ಜಿಲ್ಲೆಗೆ 13ನೇ ಸ್ಥಾನ (77.92%)
ಬೆಂಗಳೂರು ಉತ್ತರ ಜಿಲ್ಲೆಗೆ 14ನೇ ಸ್ಥಾನ (77.09%)
ಹಾವೇರಿ ಜಿಲ್ಲೆಗೆ 15ನೇ ಸ್ಥಾನ (75.85%)
ತುಮಕೂರು ಜಿಲ್ಲೆಗೆ 16ನೇ ಸ್ಥಾನ (75.16%)
ಗದಗ ಜಿಲ್ಲೆಗೆ 17ನೇ ಸ್ಥಾನ (74.76%)
ಚಿಕ್ಕಬಳ್ಳಾಪುರ ಜಿಲ್ಲೆಗೆ 18ನೇ ಸ್ಥಾನ (73.61%)
ಮಂಡ್ಯ ಜಿಲ್ಲೆಗೆ 19ನೇ ಸ್ಥಾನ (73.59%)
ಕೋಲಾರ ಜಿಲ್ಲೆಗೆ 20ನೇ ಸ್ಥಾನ (73.57%)
ಚಿತ್ರದುರ್ಗ ಜಿಲ್ಲೆಗೆ 21ನೇ ಸ್ಥಾನ (72.85%)
ಧಾರವಾಡ ಜಿಲ್ಲೆಗೆ 22ನೇ ಸ್ಥಾನ (72.67%)
ದಾವಣಗೆರೆ ಜಿಲ್ಲೆಗೆ 23ನೇ ಸ್ಥಾನ (72.49%)
ಚಾಮರಾಜನಗರ ಜಿಲ್ಲೆಗೆ 24ನೇ ಸ್ಥಾನ (71.59%)
ಚಿಕ್ಕೋಡಿ ಜಿಲ್ಲೆಗೆ 25ನೇ ಸ್ಥಾನ (69.82%)
ರಾಮನಗರ ಜಿಲ್ಲೆಗೆ 26ನೇ ಸ್ಥಾನ (69.53%)
ವಿಜಯನಗರ ಜಿಲ್ಲೆಗೆ 27ನೇ ಸ್ಥಾನ (65.61%)
ಬಳ್ಳಾರಿ ಜಿಲ್ಲೆಗೆ 28ನೇ ಸ್ಥಾನ ಸಿಕ್ಕಿದೆ (64.99%)
ಬೆಳಗಾವಿ ಜಿಲ್ಲೆಗೆ 29ನೇ ಸ್ಥಾನ (64.93%)
ಮಧುಗಿರಿ ಜಿಲ್ಲೆಗೆ 30ನೇ ಸ್ಥಾನ (62.44%)
ರಾಯಚೂರು ಜಿಲ್ಲೆಗೆ 31ನೇ ಸ್ಥಾನ (61.2%)
ಕೊಪ್ಪಳ ಜಿಲ್ಲೆಗೆ 32ನೇ ಸ್ಥಾನ (61.16%)
ಬೀದರ್ ಜಿಲ್ಲೆಗೆ 33ನೇ ಸ್ಥಾನ (57.52%)
ಕಲಬುರಗಿ ಜಿಲ್ಲೆಗೆ 34ನೇ ಸ್ಥಾನ (53.04%)
SSLC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ 50.59% ಸಿಕ್ಕಿದೆ
ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪಾಸಾದವರು ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದಾಗಿದೆ.
2023-24ನೇ ಸಾಲಿನ ಫಲಿತಾಂಶದಲ್ಲಿ ಕಳೆದ ಬಾರಿ 14ನೇ ಸ್ಥಾನಕ್ಕೆ ಕುಸಿದಿದ್ದ ಉಡುಪಿ ಮೊದಲ ಸ್ಥಾನಕ್ಕೆ ಜಿಗಿದಿದೆ. 2023ರಲ್ಲಿ ಫಸ್ಟ್ ಬಂದಿದ್ದ ಚಿತ್ರದುರ್ಗ ಈ ಬಾರಿ 21ನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದೆ.