Friday, November 22, 2024
Flats for sale
Homeರಾಜ್ಯಬೆಂಗಳೂರು : ಬಿಯರ್ ಪ್ರಿಯರಿಗೆ ಬಿಗ್ ಶಾಕ್ - 7 ತಿಂಗಳಲ್ಲಿ 3 ಬಾರಿ ಬಿಯರ್...

ಬೆಂಗಳೂರು : ಬಿಯರ್ ಪ್ರಿಯರಿಗೆ ಬಿಗ್ ಶಾಕ್ – 7 ತಿಂಗಳಲ್ಲಿ 3 ಬಾರಿ ಬಿಯರ್ ದರ ಹೆಚ್ಚಳ ಮಾಡಿದ ಸರಕಾರ,ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ.

ಬೆಂಗಳೂರು : ರಾಜ್ಯದಲ್ಲಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೇನು ಕೆಲವೇ ತಿಂಗಳು ಕಳೆದಿದೆ ಅಷ್ಟೇ ಆದರೆ ಕಳೆದ ೭ ತಿಂಗಳಿಂದ ೩ ಬಾರಿ ಬಿಯರ್ ದರವನ್ನು ಹೆಚ್ಚಳ ಮಾಡಿ ಮದ್ಯ ಪ್ರಿಯರಿಗೆ ಆಘಾತ ನೀಡಿದೆ. ಸರಕಾರದ ಅಧಿಕಾರಕ್ಕೆ ಬರಲು ನೀಡಿದ ಅಶ್ವಾಶನೆಯ ಭಾಗ್ಯಗಳಿಗೆ ಹಣ ಹೂಡಿಸಲು ಈ ನಿರ್ಧಾರ ತೆಗೆದಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ರಾಜ್ಯ ಸರಕಾರ ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಅಂದ್ರೆ ಶೇ 10 ರಷ್ಟು ಹೆಚ್ಚಿಸಿದೆ. ಇದರಿಂದಾಗಿ, ಬಿಯರ್ ಬಾಟಲ್ ಬೆಲೆ 10 ರಿಂದ 15 ರೂಪಾಯಿ ಹೆಚ್ಚಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.ಇದರಿಂದ ಬಾರ್ ಮಾಲೀಕರಿಗೂ ವ್ಯವಹಾರದಲ್ಲಿ ಸಮಸ್ಯೆ ಉಂಟಾಗಿದ್ದು ಸರಕಾರದ ಈ ನಿರ್ಧಾರದಿಂದ ಜನಸಾಮನ್ಯರ ಜೇಬಿಗೆ ಪದೇ ಪದೇ ದರ ಏರಿಕೆ ಮಾಡಿ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕಿಸೆಯಲ್ಲಾ ಖಾಲಿಯಾದರೂ ಕಿಕ್ ಮಾತ್ರ ಏರದಂತಾಗಿದೆ.

ಕಳೆದ 7 ತಿಂಗಳಲ್ಲಿ 3ನೇ ಬಾರಿ ಬಿಯರ್ ದರ ಹೆಚ್ಚಳ ಮಾಡಿದ್ದೂ ಪದೆಪದೇ ದರ ಏರಿಸಿದರೆ ವ್ಯಾಪಾರಕ್ಕೂ ಹೊಡೆತ ಆಗುತ್ತದೆ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.ಇದರೊಂದಿಗೆ, ಕಳೆದ 7 ತಿಂಗಳ ಅವಧಿಯಲ್ಲಿ 3ನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾದಂತಾಗಿದೆ. ಬಿಯರ್ ಬೆಲೆ ಒಟ್ಟು 40 ರೂ. ಜಾಸ್ತಿ ಆಗಿದೆ.

ಈ ವರ್ಷ ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ಆದಾಯ ಸಂಗ್ರಹಕ್ಕೆ ಗುರಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುಕ್ಕಾಣಿ ಹಿಡಿಯುತ್ತದ್ದಂತೆಯೇ ಬಿಯರ್‌ ಮೇಲೆ ಶೇ 20ರಷ್ಟು ಸುಂಕ ಹೆಚ್ಚಿಸಿತ್ತು. ಉತ್ಪಾದನಾ ವೆಚ್ಚ ಸರಿದೂಗಿಸಿಸಲು ಬಾಟಲ್‌ ಮೇಲೆ 10 ರೂ. ಏರಿಸಿತ್ತು. ಇದೀಗ ಮತ್ತೆ ಬಿಯರ್‌ ದರ ಹೆಚ್ಚಳ ಮಾಡಿದ್ದು ಮದ್ಯಪ್ರಿಯರಿಗೆ ಆಕ್ರೋಶ ಉಂಟಾಗಿದೆ.

ಅಬಾಕಾರಿ ಇಲಾಖೆಗೆ ರಾಜ್ಯ ಸರಕಾರ 36 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿ ಟಾರ್ಗೆಟ್ ನೀಡಿದ್ದು 10 ತಿಂಗಳಲ್ಲಿ 27 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದೆ.ಇತ್ತ ಬಿಯರ್ ಪ್ರಿಯರ್ ಹಣ ದುಬಾರಿಯಾದ ಪರಿಣಾಮ ಬಿಯರ್ ಸಹವಾಸ ಬೇಡವೆಂದು ವಿಸ್ಕಿ ಕುಡಿಯುತ್ತಿದ್ದಾರೆ.ಇನ್ನೆರಡು ತಿಂಗಳಿನಲ್ಲಿ ಅಬಾಕಾರಿ ಇಲಾಖೆಯ ಟಾರ್ಗೆಟ್ ತಲುಪಲು 9 ಸಾವಿರ ಕೋಟಿ ಸಂಗ್ರಹವಾಗಬೇಕಿದೆ.

ಬಿಯರ್ ಮಾರಾಟದಿಂದ ಸರ್ಕಾರಕ್ಕೆ ಬರುವ ಆದಾಯ ಬಹಳ ಕಡಿಮೆ‌. ಹೀಗಾಗಿ ದರ ಏರಿಕೆ ಮಾಡಿ ಖಜಾನೆ ತುಂಬಿಸಿಕೊಳ್ಳಲು ಚಿಂತನೆ ಮಾಡಿದೆ. ಈ ಮೂಲಕ ಮದ್ಯ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular