ಬೆಂಗಳೂರು : 76ನೇ ಗಣರಾಜ್ಯೋತ್ಸವ ಹಿನ್ನಲೆ ಶನಿವಾರ ರಾಷ್ಟ್ರಪತಿಗಳು 2025ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳ ಒಟ್ಟು 9 ಸಾಧಕರು ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡಿದ್ದಾರೆ. ಒಬ್ಬರಿಗೆ ಪದ್ಮ ವಿಭೂಷಣ, ಇಬ್ಬರು ಪದ್ಮ ಭೂಷಣ ಪಡೆದುಕೊಂಡಿದ್ದರೆ, ಆರು ಸಾಧಕರು ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಕಲಾ ವಿಭಾಗದಲ್ಲಿ ಸಾಧನೆಗಾಗಿ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂಗೆ ಪದ್ಮವಿಭೂಷಣ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಅರಕಲಗೂಡು ಸೂರ್ಯಪ್ರಕಾಶ್ ಮತ್ತು ಕಲಾ ವಿಭಾಗದಲ್ಲಿ ಸಾಧನೆಗಾಗಿ ಅನಂತನಾಗ್ಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ, ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್, ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ ವೈದ್ಯೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಚಲನಚಿತ್ರ ನಿರ್ಮಾಪಕ ಹಾಸನ ರಘು, ಉದ್ಯಮಿ ಪ್ರಶಾಂತ್ ಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಹಜಾಭಿನಯ ಅನಂತ್ ನಾಗ್ ಸಹಜಾಭಿನಯದ ಚತುರರೆಂದೇ ಹೆಸರಾದ ಹಿರಿಯ ನಟ ಅನಂತನಾಗ್ ಬಹುಮುಖ ಪ್ರತಿಭೆ, ಬಹುರೂಪಿ. ರಂಗಭೂಮಿ, ಚಲನಚಿತ್ರ, ಕಿರುತೆರೆ, ರಾಜಕಾರಣ, ಸಾಹಿತ್ಯ ಮುಂತಾದ ಬಹುಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ದೈತ್ಯ ಪ್ರತಿಭೆ. ಉತ್ತರ ಕನ್ನಡ ಜಿಲ್ಲೆಯ ಅಪ್ಪಟ ಕಲಾಚೇತನ. 1948ರ ಸೆಪ್ಟೆಂಬರ್ 4 ರಂದು ಜನಿಸಿದ ಅನಂತ್ನಾಗ್ ನಾಗರಕಟ್ಟೆ ಮೂಲತಃ ರಂಗನಟ. ಮರಾಠಿ ರಂಗಭೂಮಿಯಿAದ ಮೈದಳೆದವರು. ಕನ್ನಡ,ಮ ಕೊಂಕಣಿ ಮತ್ತು ಮರಾಠಿ ರಂಗಭೂಮಿಯಲ್ಲಿ ಹತ್ತಿರತ್ತಿರ ದಶಕದವರೆಗೆ ಕಲಾಸೇವೆಗೈದು ಪಿ.ವಿ.ನಂಜರಾಜ ಅರಸ್ ಅವರ ಸಂಕಲ್ಪ’ ಚಿತ್ರದ ಮೂಲಕ 1973 ರಲ್ಲಿ ಚಿತ್ರರಂಗ ಪ್ರವೇಶಿಸಿದವರು. ಹೊಸ ಅಲೆಯ ಚಿತ್ರಗಳ ನೆಚ್ಚಿನ ನಟನಾಗಿ ರೂಪುಗೊಂಡ ಅನಂತ್ನಾಗ್ ಜಿ.ವಿ.ಅಯ್ಯರ್ ಅವರ
ಹಂಸಗೀತೆ’ನ ಭೈರವಿ ವೆಂಕಟಸುಬ್ಬಯ್ಯ ಪಾತ್ರ ಬಲು ಜನಪ್ರಿಯ 1977 ರಲ್ಲಿ ದೊರೆಭಗವಾನ್ ಅವರ `ಬಯಲುದಾರಿ’ ಚಿತ್ರದ ಮೂಲಕ ಮುನ್ನೆಲೆಗೆ. ಒಂದೆಡೆ ಕಾದಂಬರಿ ಚಿತ್ರಗಳು, ಮತ್ತೊಂದೆಡೆ ಪ್ರಯೋಗಾತ್ಮಕ ಚಿತ್ರಗಳ ಮುಖೇನ ಪ್ರವರ್ಧಮಾನಕ್ಕೆ ಬಂದ ಅನಂತ್ನಾಗ್ ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’ ಚಿತ್ರಗಳಿಂದ ಹೆಸರುವಾಸಿಯಾದವರು. ಸದಭಿರುಚಿ ಚಿತ್ರಗಳ ಸರದಾರರೆಂಬ ಹೆಗ್ಗಳಿಕೆ, ಬೆಳದಿಂಗಳ ಬಾಲೆ, ಮತದಾನ,ಸಿಂಹಾಸನದಿAದ ಕಳೆದ ದಶಕದ ಗಾಳಿಪಟ, ಮುಂಗಾರುಮಳೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದವರೆಗೂ ಅನಂತ್ ಅಭಿನಯಕ್ಕೆ ಅನಂತ್ ಅವರೇ ಸಾಟಿ. ಶ್ಯಾಂಬೆನಗಲ್. ಗೋವಿಂದನಿಹಲಾನಿ ಅಂತಹ ಹಿಂದಿ ಚಿತ್ರರಂಗದ ದಿಗ್ಗಜರ ನೆಚ್ಚಿನ ನಟರಾಗಿದ್ದ ಅನಂತ್ನಾಗ್ ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನಾಲ್ಕು ಬಾರಿ ರಾಜ್ಯ ಪ್ರಶಸ್ತಿ, 6 ಬಾರಿ ಫಿಲಂಫೇರ್ ಪ್ರಶಸ್ತಿ, ವಿಷ್ಣು ವರ್ಧನ ಪ್ರಶಸ್ತಿ, ನನ್ನ ತಮ್ಮ ಶಂಕರ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿರುವ ಅನಂತ್ನಾಗ್ ಅವರ ಚಿತ್ರರಂಗದ ಪಯಣಕ್ಕೀಗ ೫೨ರ ಸಂಭ್ರಮ. ಆ ಸಡಗರಕ್ಕೆ ಹೊನ್ನಗರಿ ಮೂಡಿಸುವಂತೆ ಇದೀಗ
ಪದ್ಮಭೂÀಣ ಪ್ರಶಸ್ತಿಯ ಗರಿ ಇವರಿಗೆ ಸಂದಿದೆ.
ಸಾಹಸನೇ ಬದುಕು ಹಾಸನ ರಘು
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಸಾಹಸಪ್ರತಿಭೆ ಹಾಸನ್ ರಘು. ಕರ್ನಾಟಕ ಸಾಹಸ ಕಲಾವಿದರ ಸಂಘದ ಅಧ್ಯಕ್ಷರಾಗಿ ವೃತ್ತಿನಿರತರ ಸಂಕಷ್ಟ ಗಳಿಗೆ ಸ್ಪಂದಿಸಿದವರು. ಮೂಲತ ಹಾಸನ ಜಿಲ್ಲೆಯವರಾದ ಹಾಸನ ರಘು ಅವರು ನೂರಾರು ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿ ಹೆಸರಾದವರು. ಸಾಹಸಿಂಹ ವಿಷ್ಣು ವರ್ಧನ್ ಅವರ ಹಲವು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ ಕೀರ್ತಿ ಅವರದ್ದು. ಸಾವಿರಾರು ಮಕ್ಕಳಿಗೆ ಸಾಹಸ ಕಲೆಯನ್ನು ಕಲಿಸಿದ ಗುರು. ರಾಮನಗರದ ರಾಮನಗರದ ಶ್ರೀ ರಾಮದೇವರ ಬೆಟ್ಟದ ರಸ್ತೆ ಹತ್ತಿರ ಸಾಹಸ ಕಲಾ ಶಿಕ್ಷಣ ಕೇಂದ್ರ ವನ್ನು ಸ್ಥಾಪಸಿರುವ ಸಾಹಸಿ. ಹಾವೇರಿ ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಹಾಸನ ರಘು ಅವರಿಗೆ ಇದೀಗ ಪದ್ಮಶ್ರೀಯ ಗೌರವ ಸಂದಿದ್ದು ಕನ್ನಡ ಚಿತ್ರರಂಗದ ಮಟ್ಟಿಗೆ ಸಾಹಸ ನಿರ್ದೇಶಕರೊಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದ್ದು ಇದೇ ಮೊದಲು ಮತ್ತು ದಾಖಲೆಯಾಗಿದೆ.
ಬಹುಮುಖಿ ಸಾಧಕ ಸೂರ್ಯಪ್ರಕಾಶ್
ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಡಾ. ಅರಕಲಗೂಡು ಸೂರ್ಯಪ್ರಕಾಶ್. ಹಾಸನ ಜಿಲ್ಲೆಯ ಅರಕಲಗೂಡಿನವರಾದ ಸೂರ್ಯಪ್ರಕಾಶ್ ಹೆಸರಾಂತ ಪತ್ರಕರ್ತರು. ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಮೈಸೂರು ವಿವಿಯಲ್ಲಿ ಸಮಾಜಶಾಸ್ತçದಲ್ಲಿ ಸ್ನಾತಕೋತ್ತರ ಪದವಿ, ತುಮಕೂರು ವಿವಿಯಲ್ಲಿ ಡಿ.ಲಿಟ್ ಪಡೆದ ಸೂರ್ಯಪ್ರಕಾಶ್ ಜೀ ನ್ಯೂಸ್, ದಿ ಪಯೋನಿರ್,ಏಷ್ಯಾ ಟೈಮ್ಸ್, ಇಂಡಿಯನ್ ಎಕ್ಸ್ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. ರಾಜಕೀಯ ವಿಶ್ಲೇÀಣೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಪಾರ ಜ್ಞಾನವುಳ್ಳವರು. ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿಅಂಕಣಕಾರರಾಗಿಯೂ ಬಲು ಜನಪ್ರಿಯರು.
ಸಂಗೀತಲೋಕದ ಹೊಸ ಕ್ರೇಜ್ ರಿಕಿ
ಮೂರು ಬಾರಿ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿಗೆ ಭಾಜನರಾಗಿರುವ ರಿಕಿಕೇಜ್ ಹೆಸರಾಂತ ಗಾಯಕ, ಜನಪ್ರಿಯ ಸಂಗೀತ ನಿರ್ದೇಶಕ. ಅಮೆರಿಕಾದ ಉತ್ತರ ಕರೊಲಿನಾದಲ್ಲಿ ಜನಿಸಿರುವ ರಿಕಿಕೇಜ್ ಮೂಲತಃ ಭಾರತದವರು. ಬೆಂಗಳೂರಿನಲ್ಲಿ ನೆಲೆಸಿರುವ ರಿಕಿಕೇಜ್ “ವಿಂಡ್ಸ್ ಆಫ್ ಸಂಸಾರ”, ಡಿವೈನ್ ಟೈಡ್ಸ್ ಮತ್ತು ಮತ್ತು ಬ್ರೇಕ್ ಆಫ್ ಡಾನ್ ಧ್ವನಿಸುರಳಿಗಳಿಗೆ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿ ಪಡೆದಿರುವ ರಿಕಿಕೇಜ್ ಕನ್ನಡದ ಐದು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ೩೦೦೦ಕ್ಕೂ ಅಧಿಕ ಜಾಹೀರಾತುಗಳಿಗೆ ಸ್ವರಸಂಯೋಜನೆ, ೨೦೧೧ರ ವಿಶ್ವಕಪ್ ಕ್ರಿಕೆಟ್ ಉದ್ಘಾಟನಾ ಸಮಾರಂಭಕ್ಕೆ ಸಂಗೀತ ಸAಯೋಜಿಸಿದ ಕೀರ್ತಿ ಅವರದ್ದು. ಸಂಗೀತ ಶಿಕ್ಷಣ, ಪ್ರಾಣಿಗಳ ಹಕ್ಕು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಿಕಿಕೇಜ್ “ಮಜೊಲ್ಲಿ ಮ್ಯೂಸಿಕ್ ಟ್ರಸ್ಟ್” ನ ಸ್ಥಾಪಕ ಸದಸ್ಯರು. ಜಗತ್ತಿನಾದ್ಯಂತ ಸAಗೀತ ಕಾರ್ಯಕ್ರಮ ನೀಡಿರುವ ಅಪರೂಪದ ಗಾಯಕರು.
ಡಿಜಿಟಲ್ ಉದ್ಯಮದ ಶಿಖರ ಪ್ರಶಾಂತ್
ಭಾರತೀಯ ಡಿಜಿಟಲ್ ಉದ್ಯಮದಲ್ಲಿ ಬಹುದೊಡ್ಡ ಹೆಸರು ಪ್ರಶಾಂತ್ ಪ್ರಕಾಶ್. ಅಚ್ಚ ಕನ್ನಡಿಗರಾದ ಪ್ರಕಾಶ್ ಡಿಜಿಟಲ್ ಉದ್ಯಮದಲ್ಲಿ ಹತ್ತಿರತ್ತಿರ ಮೂರು ದಶಕಗಳ ಅನುಭವವುಳ್ಳವರು. ಬೆಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನದಲ್ಲಿ ಇಂಜಿನಿಯರಿAಗ್ ಪದವಿ, ಅಮೆರಿಕದ ಡೆಲವೇರ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ
ಪದವಿ ಪಡೆದು ೧೯೯೫ರಲ್ಲಿ ಭಾರತದ ಮೊಟ್ಟಮೊದಲ ಅನಿಮೇಷನ್ ಕಂಪನಿಗಳನ್ನು ಒಂದೆನಿಸಿರುವ ವಿಶುಯಲ್ ರಿಯಾಲಿಟಿ ಸಂಸ್ಥೆಯನ್ನು ಸ್ಥಾಪಿಸಿದರು. ಆನಂತರ ನೆಟ್ಕ್ರಾಫ್ಟ್ ಮೂಲಕ ಹೆಸರುವಾಸಿ. ಎರಾಸ್ಮಿಕ್ ಸೇರಿದಂತೆ ಹತ್ತು ಹಲವು ಸಂಸ್ಥೆಗಳನ್ನು ಮುನ್ನೆಡೆಸಿದ ನಾಯಕ. ಡಿಜಿಟಲ್ ಕ್ಷೇತ್ರದ ೩೦ಕ್ಕೂ ಹೆಚ್ಚು ಕಂಪನಿಗಳ ಆಡಳಿತ ಮಂಡಳಿಯ ಸದಸ್ಯ. ಕರ್ನಾಟಕ ಸರ್ಕಾರದ ಸ್ಟಾರ್ಟ್ಪ್ ವಿÀನ್ ಗ್ರೂಪ್ನ ಅಧ್ಯಕ್ಷರಾಗಿ, ಬಸವರಾಜ್ ಬೊಮ್ಮಾಯಿ ಅವರ ಡಿಜಿಟಲ್ ತಂಡದ ಸಲಹೆಗರರಾಗಿಯೂ ಕೆಲಸ ಮಾಡಿದವರು.
ವೈದ್ಯೆಗೆ ಒಲಿದ ಪದ್ಮಶ್ರೀ
ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವೇ ಡಾ. ವಿಜಯಲಕ್ಷ್ಮಿ ದೇಶಮಾನೆ. ಕಲಬುರಗಿ ಮೂಲದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿದೆ.ತರಕಾರಿ ಮಾರಾಟ ಮಾಡುವ ಕುಟುಂಬದಿಂದ ಕ್ಯಾನ್ಸರ್ ಸರ್ಜನ್ , ಪದ್ಮಶ್ರೀ ಪುರಸ್ಕಾರವರೆಗೆ ವಿಜಯಲಕ್ಷ್ಮೀ ಸಾಗಿದ ದಾರಿಯುದ್ದಕ್ಕೂ ಬರೀ ಕಷ್ಟಗ ಸರಮಾಲೆ ಹೊತ್ತೆ ಸಾಧಿಸಿದವರು. ಕ್ಯಾನ್ಸರ್ ರೋಗಿಗಳ ಪಾಲಿನ ಧನ್ವಂತರಿ ಎಂದೇ ಖ್ಯಾತಿ ಗಳಿಸಿದ್ದರು. ಅದಕ್ಕೆ ಕಾರಣ ಅವರ ಶ್ರದ್ಧೆ, ಶ್ರಮ, ತ್ಯಾಗ, ಮಾನವೀಯ ಕಳಕಳಿ, ವೈದ್ಯ ವೃತ್ತಿಯನ್ನೇ ಉಸಿರಾಗಿಸಿಕೊಂಡು ಬದುಕಿದ ಅಪರೂಪದ ವೈದ್ಯೆ. ಎಂ ಬಿ ಬಿ ಎಸ್, ಎಂ ಎಸ್ (ಜನರಲ್ ಸರ್ಜರಿ) ಎಫ.ಎ. ಐ. ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಎನ್ನಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದ ಅವರು ಕಿದ್ವಾಯಿ ನಿರ್ದೇಶಕಿಯಾಗಿಯೂ ಕೆಲಸ ನಿರ್ವಹಿಸಿದ್ದರು.
ಕಲಬುರಗಿಯ ಕೊಳಗೇರಿ ಪ್ರದೇಶದಲ್ಲಿ ವಾಸವಾಗಿದ್ದರು ವಿಜಯಲಕ್ಷ್ಮಿ ಹೆತ್ತವರು. ತಂದೆ ಬಾಬುರಾವ್ ಕಟ್ಟಿಗೆ ಕಡಿಯುವುದು, ಕೂಲಿ ಮಾಡುತ್ತಾ ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಸೇರಿದರು. ತಾಯಿ ರತ್ನಮ್ಮ ತರಕಾರಿ ಮಾರಾಟದಿಂದ ಕುಟುಂಬಕ್ಕೆ ನೆರವಾಗಿದ್ದರು.. ಬಾಬುರಾವ್- ರತ್ನಮ್ಮ ದಂಪತಿಗೆ ವಿಜಯಲಕ್ಷ್ಮಿಸೇರಿದಂತೆ ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕುಟುಂಬದಲ್ಲಿ ವಿಜಯಲಕ್ಷ್ಮಿ ಅವರು ವೈದ್ಯೆಯಾಗಿ ಬಡವರಿಗೆ ಒಳ್ಳೆಯ ಸೇವೆ ಒದಗಿಸಬೇಕು ಎಂಬುದು ಹೆತ್ತವರ ಕನಸು.
ಕಲಬುರಗಿಯ ಚಕ್ರಕಟ್ಟಾ ಮಾರುತಿ ಮಂದಿರದ ಬಳಿ ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದ ತಾಯಿಯೊದಿಗೆ ತರಕಾರಿ ಮಾರುತ್ತಲೇ ಹೈಸ್ಕೂಲ್ ಶಿಕ್ಷಣ ಕನ್ನಡ ಪೂರೈಸಿದ ವಿಜಯಲಕ್ಷ್ಮೀ ನಂತರ ಹುಬ್ಬಳ್ಳಿಯಿಂದ ವೈದ್ಯಕೀಯ ಪದವಿ ಪಡೆದರು. ಮಗಳು ವೈದ್ಯಳಾಗಬೇಕೆಂಬ ಆಸೆಗೆ ತಾಯಿ ರತ್ನಮ್ಮ ತಮ್ಮ ಮಂಗಳಸೂತ್ರ ಮಾರಿ ಅದರಿಂದ ಬಂದ ಹಣದಿಂದಲೇ ವಿಜಯಲಕ್ಷ್ಮೀಯವರ ವೈದ್ಯಕೀಯ ಶಿಕ್ಷಣದ ಶುಲ್ಕ ಭರಿಸಿದ್ದರು. ತರಕಾರಿ ಮಾರುತ್ತಲೇ ಓದುತ್ತಾ, ಡಾಕ್ಟರ್ ಪದವಿ ಪಡೆದ ಬಂದ ಡಾ. ವಿಜಯಲಕ್ಷ್ಮೀ ದೇಶಮಾನ್ಯೆ ಕ್ಯಾನ್ಸರ್ ಸರ್ಜನ್ ಆಗಿ ಮಾಡಿರುವ ಸಾಧನೆ, ಸಾಗಿದ ದಾರಿ, ಏರಿದ ಎತ್ತರ ಮಾದರಿ. ರೋಗಿಗಳ ಸೇವೆಯೇ ಪರಮ ಧ್ಯೇಯವಾಗಿಸಿಕೊಂಡಿದ್ದ ಡಾ. ವಿಜಯಲಕ್ಷ್ಮಿ, ದಿನದ ಬಹುತೇಕ ಸಮಯ ಆಸ್ಪತ್ರೆಯಲ್ಲೇ ಕಳೆಯುತ್ತಿದ್ದರು. ಸಮಯದ ಪರಿವೆಯೇ ಇಲ್ಲದೇ ಚಿಕಿತ್ಸೆ ನೀಡಬೇಕೆಂಬ ಉದ್ದೇಶಕ್ಕೆ ಡಾ.ವಿಜಯಲಕ್ಷ್ಮಿ ವಾಚ್ ಕಟ್ಟುತ್ತಲೇ ಇರಲಿಲ್ಲವಂತೆ. ಅವರು ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ದೇಶ, ವಿದೇಶಗಳಲ್ಲೂ ಅವರ ಸಾಧನೆ ಗುರುತಾಗಿದೆ. ತಮ್ಮ ಬದುಕನ್ನೇ ವೈದ್ಯ ವೃತ್ತಿಗೆ ಸಮರ್ಪಿಸಿದ ಡಾ. ವಿಜಯಲಕ್ಷ್ಮಿ, ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ವೈದ್ಯರ ನಡುವೆ, ಸೇವೆಯಿಂದಲೇ ಫೇಮಸ್ ಆದ ಡಾ.ವಿಜಯಲಕ್ಷ್ಮಿ ಇದೀಗ ಪದ್ಮಶ್ರೀ ಗೌರವ ಒದಗಿದೆ.