ಬೆಂಗಳೂರು : ಈ ಫೈನಾನ್ಸ್ ಕಂಪೆನಿಗಳೆ ಇಷ್ಟು ಭಯ ಪಡುವವರಿದ್ದಾರೆ ಅವರನ್ನ ಬೆದರಿಸಿ ಸಾಯಿಸಿ ಬಿಡುತ್ತಾರೆ .ರಾಜ್ಯದಲ್ಲಿ ಬಡ ಜನರ ಮೇಲೆ ಈ ಫೈನಾನ್ಸ್ ಕಂಪೆನಿಗಳು ದೌರ್ಜನ್ಯ ನಡೆಸುತ್ತಲೇ ಇದೆ. ಕಾನೂನು ಗೊತ್ತಿದವನು ಇಂತಹವರಿಗೆ ಸರಿಯಾಗಿಯೇ ಜಾಡಿಸಿ ಬಿಡುತ್ತಾರೆ. ಏನು ಗೊತ್ತಿಲ್ಲದವರ ಮೇಲೆ ಇವರಂತೂ ದಬ್ಬಾಳಿಕೆ ಮಾಡಿ ಲೂಟಿ ಹೊಡೆಯುವುದು ಇತ್ತೀಚಿಗೆ ಅತಿಹೆಚ್ಚು ನಡೆಯುತ್ತಿದೆ.
ವೃದ್ದ ನಾಗಪ್ಪ ಚಕ್ರ (ಬ್ಲೇಡ್ ಕಂಪನಿ ) ಜನಸ್ಮಾಲ್ ಪೈನಾನ್ಸ್ ಮೂಲಕ 2 ಲಕ್ಷ ಹಣ ಪಡೆದಿದ್ದರು ಆದರೆ ಒಂದು ವರ್ಷದಿಂದ ಅರೋಗ್ಯ ಹದಗೆಟ್ಟಕಾರಣ ಹಣ ಕಟ್ಟಲು ಸ್ವಲ್ಪ ಜಾಸ್ತಿ ಸಮಯ ಬೇಕಾಯಿತು. ಆದರೂ ಕಷ್ಟ ಪಟ್ಟು ಜೊತೆಗೆ 1 ಲಕ್ಷ 90 ಸಾವಿರ ಹಣವನ್ನ ವೃದ್ದ ನಾಗಪ್ಪ ತೀರಿಸಿದ್ದುಉಳಿದ ಹಣ ಕಟ್ಟಲು ತಡ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಜಯಲಕ್ಷ್ಮಮ್ಮ ಮತ್ತು ನಾಗಪ್ಪ ಎನ್ನುವ ಈ ದಂಪತಿ ಜೀವನೋಪಾಯಕ್ಕೆ ಎಂದು ಕುರಿ ಮತ್ತು ಮೇಕೆಗಳನ್ನ ಮೇಯಿಸಿಕೊಂಡಿದ್ದು, ಹಳೆಯ ಮನೆಯಲ್ಲೆ ವಾಸವಾಗಿದ್ದರು.ಹೇಂಗೂ ದಿನ ಹೋಗ್ತಿತ್ತು ಆದರೆ ಕಷ್ಟ ಇರುವುದರಿಂದ ಸ್ವಲ್ಪ ಹಣ ಪಾವತಿಮಾಡಲು ತಡವಾಹಿತು. ಈ ಬಗ್ಗೆ ಮನೆಗೆ ಬಂದ ಪೈನಾನ್ಸ್ ಸಿಬ್ಬಂದಿ, ಮನೆಯಲ್ಲೆ ಕುರಿ ಮೇಕೆ ಮತ್ತು ಕೋಳಿಯನ್ನ ಬಿಟ್ಟು ಮನೆ ಡೋರ್ಗೆ ಬೀಗ ಹಾಕಿ ಅಮಾನವೀಯವಾಗಿ ವರ್ತಿಸಿ ಲಾಕ್ ಮಾಡಿ ವೃದ್ಧ ದಂಪತಿಗಳನ್ನು ಹೊರದಬ್ಬಿ ಹೋಗಿದ್ದಾರೆ.
ಈ ಘಟನೆ ನಡೆದು ತಿಂಗಳುಗಳೆ ಕಳೆದಿದ್ದು ಏನು ತಿಳಿಯದ ಮೂಕ ಪ್ರಾಣಿಗಳಿಗೆ ಕಳೆದ ಎರಡು ತಿಂಗಳಿನಿಂದ ಮನೆಯ ಮೇಲ್ಚಾವಣಿಗೆ ಏಣಿ ಹಾಕಿಕೊಂಡು ವೃದ್ದ ದಂಪತಿ ಮೇವು ನೀರು ನೀಡುತ್ತಿದ್ದು, ಮನೆಯಿಲ್ಲದೆ ನೆರೆಹೊರೆಯ ಮನೆಯಲ್ಲಿ ವಾಸವಾಗಿದ್ದರು.ದಿನನಿತ್ಯ ವೃದ್ದ ನಾಗಪ್ಪ ಮನೆಮೇಲೆ ಹತ್ತಿ ಮೇವು ನೀಡುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ ಬಳಿಕ ವಿಚಾರ ತಿಳಿದು ಸ್ಥಳಕ್ಕೆ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಅಧಿಕಾರಿಗಳ ಸಮೇತ ಭೇಟಿ ನೀಡಿದ್ದು . ಜತೆಗೆ ಪೈನಾನ್ಸ್ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್, ಜಾನುವಾರುಗಳನ್ನ ಮನೆಯಲ್ಲಿಟ್ಟು ಸೀಜ್ ಮಾಡಿದಕ್ಕೆ ಪುಲ್ ಗರಂ ಆದರು. ಅಲ್ಲದೆ ಸಿಬ್ಬಂದಿಯಿಂದ ಮನೆಯ ಬೀಗ ಒಡೆದು ಹಾಕಿಸಿ ವೃದ್ದರನ್ನ ಮನೆ ಒಳಗಡೆ ಕಳಿಸಿದ್ದು, ಪೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಲು ಬಂದ್ರೆ ತಮಗೆ ದೂರು ನೀಡುವಂತೆ ವೃದ್ದ ದಂಪತಿಗೆ ದೈರ್ಯ ಹೇಳಿದ್ದಾರೆ.
ವೃದ್ದ ದಂಪತಿಯ ಪರಿಸ್ಥಿತಿಯನ್ನ ಕಂಡ ತಹಶಿಲ್ದಾರ್ ವೈಯುಕ್ತಿಕವಾಗಿ ವೃದ್ದರಿಗೆ 5 ಸಾವಿರ ನಗದು ಹಣವನ್ನ ನೀಡಿ ಸಹಾಯ ಮಾಡಿದ್ದು, ಮುಂದಿನ ದಿನಗಳಲ್ಲಿ ವೃದ್ದರಿಗೆ ಸರ್ಕಾರದ ವತಿಯಿಂದ ಸೂರು ಕಲ್ಪಿಸುವ ಭರವಸೆಯನ್ನ ನೀಡಿದರು.ಒಟ್ಟಾರೆ ಇಂತಹ ಫೈನಾನ್ಸ್ ಕಂಪನಿಯಿಂದ ಅದೆಷ್ಟೋ ಜೀವಗಳು ಬಲಿಯಾಗಿದ್ದು ಮುಂದೆ ಈ ರೀತಿಯ ಘಟನೆಗಳು ನಡೆದರೆ ಇಂತಹ ಬ್ಲೇಡ್ ಫೈನಾನ್ಸ್ ಕಂಪನಿಗಳಿಗೆ F.I.R ಹಾಕಿ ಸರಿಯಾಗಿ ಬುದ್ದಿಕಲಿಸಬೇಕೆಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.