ಬೆಂಗಳೂರು : ರಾಜ್ಯ ಸರ್ಕಾರ ನಿರ್ಮಿಸುತ್ತಿರುವ 17ಕಿ.ಮೀ ಉದ್ದದ ಹೆಬ್ಬಾಳ ಸುರಂಗ ರಸ್ತೆಯನ್ನು ವಿರೋಧಿಸಿ ಬೆಂಗಳೂರು ಉಳಿಸಿ ಸಮಿತಿ ವತಿಯಿಂದ ನ.30 ಕ್ಕೆ ಮಿಷನ್ ರಸ್ತೆಯಲ್ಲಿರುವ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಜನಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಡಾ.ಶಿವಕುಮಾರ್ ತಿಳಿಸಿದರು.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,2.5ವರ್ಷಗಳಲ್ಲಿ ಸುರಂಗ ರಸ್ತೆಯ ಬಗ್ಗೆ ಮಾತುಕತೆಗಳು ಮುನ್ನೆಲೆಗೆ ಬಂದಾಗಲೆಲ್ಲಾ, ಅದಕ್ಕೆ ತೀವ್ರವಾದ ಅಪಸ್ವರವು ಜೊತೆಜೊತೆಯಾಗಿ ಬರುತ್ತಲೇ ಇದೆ. ಆದ್ಯಾಗ್ಯೂ ರಾಜ್ಯ ಸರ್ಕಾರ ಈ ಸುರಂಗ ರಸ್ತೆ ಯೋಜನೆಯನ್ನು ಮಾಡಿಯೇ ತೀರಬೇಕೆಂದು ಹಠಕ್ಕೆ ಬಿದ್ದಿರುವ ಹಿಂದಿನ ಮರ್ಮವೇನು? ಬಸ್ ಸೇವೆ, ಮೆಟ್ರೋ ಮಾರ್ಗಗಳು, ರೈಲು ಇತ್ಯಾದಿ ಸಾರ್ವಜನಿಕ ಸಾರಿಗೆಗಳಿಂದ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.


