Saturday, March 14, 2026
Flats for sale
Homeರಾಜ್ಯಬೆಂಗಳೂರು : ಬೆಂಗಳೂರಿನ 15 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ.

ಬೆಂಗಳೂರು : ಬೆಂಗಳೂರಿನ 15 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ.

ಬೆಂಗಳೂರು : ಶುಕ್ರವಾರ ಬೆಳಗ್ಗೆ ಬೆಂಗಳೂರಿನ 15 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಇಮೇಲ್ ಮೂಲಕ ಹೇಳಿಕೊಂಡಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳಿಗಾಗಿ ಶಾಲೆಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್, ಕೋರೆಮಂಗಲ, ಬಸವೇಶನಗರ, ಯಲಹಂಕ ಮತ್ತು ಸದಾಶಿವನಗರ ಶಾಲೆಗಳಿಗೆ ಬಾಂಬ್ ನಿಷ್ಕ್ರಿಯ ದಳವನ್ನು ರವಾನಿಸಲಾಗಿದೆಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಾಗಿದೆ.

‘ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಿಗಿರಿ. ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿರಿ. ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಸಾಯಿಸುತ್ತೇವೆ. ನೀವೆಲ್ಲರೂ ಕೂಡ ಅಲ್ಲಾಹುವಿನ ವಿರೋಧಿಗಳು. ನೀವೆಲ್ಲರೂ ಸಾಯಲು ಸಿದ್ಧರಾಗಿರಿ ’ಎಂದು ಇಮೇಲ್​ನಲ್ಲಿ ಬರೆಯಲಾಗಿದೆ.

ಆದ್ರೆ, ಮುಜಾಹಿದ್ದಿನ್ ಯಾರು? ಎಲ್ಲಿಂದ ಈ ಇ-ಮೇಲ್ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಿಂದೂ-ಮುಸ್ಲಿಂ ಗಲಾಟೆಗಳ ಮಧ್ಯೆ ಈ ರೀತಿ ಬೆದರಿ ಹಾಕಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಹಿಂದೆ ಅನೇಕ ಬಾರಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಆದ್ರೆ, ಬಾರಿ ಉಗ್ರವಾದ ಪದಗಳೊಂದಿಗೆ ಬೆದರಿಕೆ ಬಂದಿದ್ದು, ಆರಂಕಕ್ಕೆ ಕಾರಣವಾಗಿದೆ. ಅಲ್ಲದೇ ಇದನ್ನು ಪೊಲಿಸರು ಗಂಭೀರವಾಗಿ ಪರಿಗಣಿಸಿದ್ದು, ಬಸವೇಶ್ವರ ನಗರದ ಶಾಲೆಯ ಮೂಲೆ ಮೂಲೆಯಲ್ಲಿ ತಪಾಸಣೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular