Friday, March 13, 2026
Flats for sale
Homeರಾಜ್ಯಬೆಂಗಳೂರು ; 10 ಅಡಿ ಆಳದ ಸಂಪ್​​ಗೆ ಬಿದ್ದ ಮಗುವಿನ ಜೀವ ಉಳಿಸಿದ PSI ನಾಗರಾಜ್,...

ಬೆಂಗಳೂರು ; 10 ಅಡಿ ಆಳದ ಸಂಪ್​​ಗೆ ಬಿದ್ದ ಮಗುವಿನ ಜೀವ ಉಳಿಸಿದ PSI ನಾಗರಾಜ್, ಜೀವ ರಕ್ಷಕನಿಗೆ ಸಾರ್ವಜನಿಕರಿಂದ ಶ್ಲಾಘನೆ.

ಬೆಂಗಳೂರು ; ಬೆಂಗಳೂರು ನಗರದ ಬಿಇಎಲ್​ನ ಬಳಿ ಮಗು ಆಟ ಆಡುತ್ತ 10 ಅಡಿ ಆಳದ ಸಂಪ್​​ಗೆ ಮಗು ಬಿದ್ದ ಪರಿಣಾಮ ಸಹಾಯಕ್ಕಾಗಿ ಮಹಿಳೆಯರು ಕೂಗಿದ್ದ ಸಂದರ್ಭದಲ್ಲಿ ಕರ್ತವ್ಯಕ್ಕೆ ಠಾಣೆಗೆ ತೆರಳುತ್ತಿದ್ದ ಪಿಎಸ್ಐ ನಾಗರಾಜ್​​ಗೆ ವಿಷಯ ತಿಳಿಸಿದ್ದು ಪಿಎಸ್ಐಯವರ ಸಮಯ ಪ್ರಜ್ಞೆಯಿಂದಾಗಿ ಎರಡುವರೆ ವರ್ಷದ ಮಗುವಿನ ಜೀವ ಉಳಿದಿರುವಂತಹ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ನಡೆದಿದೆ.

ಸಂಪ್​​ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಬ್ಯಾಟರಾಯನಪುರದ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದು ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಕೂಡಲೇ 10 ಅಡಿ ಆಳದ ಸಂಪ್​​ಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ ಮಾಡಿದ್ದು,ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ. ಏನೇ ಆಗಲಿ ಸರಿಯಾದ ಸಮಯಕ್ಕೆ ದೇವರಂತೆ ಬಂದು ಮಗುವಿನ ಜೀವ ಉಳಿಸಿದಕ್ಕೆ ಮಗುವಿನ ಪೋಷಕರು ಪಿಎಸ್ಐ ನಾಗರಾಜ್​​ಗೆ ಧನ್ಯವಾದ ಅರ್ಪಿಸಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

Most Popular