ಬೆಂಗಳೂರು : ಭ್ರಷ್ಟ ಅಧಿಕಾರಿಗಳು ಹಣಕ್ಕಾಗಿ ಅದೆಷ್ಟೋ ಪಾಕಿಸ್ತಾನ ,ಬಾಂಗ್ಲಾದೇಶ ಪ್ರಜೆಗಳಿಗೆ ಆಧಾರ್ ಕಾರ್ಡ್ ವೋಟರ್ ಐಡಿ ಮಾಡಿಕೊಟ್ಟಂತಹ ಘಟನೆ ಎಲ್ಲರಿಗೂ ತಿಳಿದ ವಿಚಾರ. ಆದರೆ ರಾಜ್ಯದಲ್ಲಿ ಹಿಂದುಗಳ ಹೆಸರಿಟ್ಟುಕೊಂಡು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಮತ್ತೊಂದು ಪಾಕಿಸ್ತಾನ ಮೂಲದ ಕುಟುಂಬವನ್ನು ಬಂಧಿಸಲಾಗಿದೆ. ದಾವಣಗೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮಹಿಳೆ ನಕಲಿ ದಾಖಲೆ ಸೃಷ್ಟಿಸಿ ಭಾರತದಲ್ಲಿ ನೆಲೆಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ.
ಪಾಕ್ ಮೂಲದ ಮಹಿಳೆ ಫಾತಿಮಾ ದಾವಣಗೆರೆಯ ಅಲ್ತಾಫ್ ಜೊತೆ ವಿವಾಹವಾಗಿದ್ದಳು. ಉಳಿದಂತೆ, ಹನೀಫ್ ಕೂಡ ಪಾಕಿಸ್ತಾನದವನಾಗಿದ್ದು ಹನೀಫ್ ಸೊಸೆ, ಮಗಳು, ಅಳಿಯನನ್ನೂ ಬಂಧಿಸಲಾಗಿದೆ. ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದಾನೆ. ಸಿದ್ದಿಕಿ ಮೊಹಮ್ಮದ್ ಯಾಸಿನ್ (ಪುತ್ರ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದಾರೆ.
ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಬಂಧನವಾಗಿರುವ ಸಂಬಂಧ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಲಾಗಿದೆ. ಡಿವೈಎಸ್ಪಿ ಮೋಹನ್ಕುಮಾರ್ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕೃಷ್ಣಕುಮಾರ್, ಜಿಗಣಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಅತ್ತಿಬೆಲೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ, ಸರ್ಜಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ಗಳಾದ ನವೀನ್, ಕುಮಾರ್ ಅವರ ತಂಡ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಪ್ರಜೆಗಳಿಗೆ ನಕಲಿ ಆಧಾರ್ ಮಾಡಿಕೊಟ್ಟವರು ಯಾರು? ಭಾರತೀಯ ದಾಖಲಾತಿಗಳನ್ನು ಮಾಡಿಕೊಟ್ಟವರನ್ನು ತಲಾಶ್ ಮಾಡಲಿದ್ದು ಈ ತನಿಖಾ ತಂಡಗಳು ದೆಹಲಿ, ಚೆನ್ನೈ ಬೆಳಗಾವಿ, ಮುಂಬೈ ಸೇರಿ ಹಲವೆಡೆ ತೆರಳಿ ಮಾಹಿತಿ ಕಲೆ ಹಾಕಲಿವೆ.ಒಟ್ಟಿನಲ್ಲಿ ದೇಶದಲ್ಲಿ ಇರುವ ದೇಶದ್ರೋಹಿಗಳಿಂದಲೇ ಪಾಕಿಸ್ತಾನ ಬಾಂಗ್ಲಾದೇಶದ ಉಗ್ರರಿಗೆ ಭಾರತದಲ್ಲಿ ನೆಲೆಬೀಡಲು ಭಾರತದ ಪ್ರಜೆಗಳ ಸಹಕಾರ ಎತ್ತಿತೋರುತ್ತಿರುವುದು ಕಂಡುಬರುತ್ತಿದೆ.