ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನಿನಲ್ಲಿ ೨೦೦೦ ಮಹಿಳೆಯರ ಚಿತ್ರವಿತ್ತು ಎಂದು ಮಾಜಿ ಚಾಲಕ ಕಾರ್ತಿಕ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾನೆ.
ಪ್ರಜ್ವಲ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಮಾಜಿ ಚಾಲಕ ಕಾರ್ತಿಕ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿ ಅಶ್ಲೀಲ ದೃಶ್ಯಾವಳಿಗಳು ಸಿಕ್ಕಿದ್ದು ಹೇಗೆ ಎಂಬುದನ್ನು ತಿಳಿಸಿದ್ದು, 2009 ರಿಂದ ನಾನು ಹೆಚ್.ಡಿ.ರೇವಣ್ಣ ಬಳಿ ಡ್ರೈವರ್ ಆಗಿದ್ದೆ. ಮೊಬೈಲಿನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದರು. ನಾನು ಅವರ ಕಡೆ ನೋಡಿದಾಗ ಫೋನ್ ತಿರುಗಿಸಿಕೊಳ್ಳುತ್ತಿದ್ದರು.
ಒಂದು ಬಾರಿ ಜಯನಗರದ ಅವರ ಗೆಳತಿ ಮನೆಗೆ ಹೋದಾಗ ಕಾರಿನಲ್ಲಿ ಮೊಬೈಲ್ ಬಿಟ್ಟಿದ್ದರು. ಪ್ರಜ್ವಲ್ ರೇವಣ್ಣ ಮೊಬೈಲ್ ಪಾಸ್ವರ್ಡ್ ನನಗೆ ತಿಳಿದಿತ್ತು. ಕುತೂಹಲದಿಂದ ಮೊಬೈಲ್ ತೆಗೆದು ನೋಡಿದಾಗ ಪ್ರಜ್ವಲ್ ರೇವಣ್ಣ ಮೊಬೈಲಿನಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳಿದ್ದವು. ಪ್ರಜ್ವಲ್ ರೇವಣ್ಣ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋಗಳು ಸೆರೆಯಾಗಿದ್ದವು. ಸುಮಾರು ೨೦೦೦ ಅಶ್ಲೀಲ ಫೋಟೋ, 30 ರಿಂದ 40 ಮಹಿಳೆಯರ ಅಶ್ಲೀಲ ವಿಡಿಯೋಗಳಿದ್ದವು. ಆ ವಿಡಿಯೋಗಳನ್ನು ಭವಾನಿ ರೇವಣ್ಣರಿಗೆ ತೋರಿಸಲೆಂದು ವರ್ಗಾಯಿಸಿಕೊಂಡೆ. ಫೋನ್ ಮಾಡಿ ಪ್ರಜ್ವಲ್ ತನಗೆ ಜೋರು ಮಾಡಿದ್ದರು. ನಮ್ಮ ನಡುವೆ ಜಗಳವಾಗಿ 2022 ರಲ್ಲಿ ನಾನು ಕೆಲಸ ಬಿಟ್ಟೆ. ಆಸ್ತಿ ವಿವಾದಕ್ಕೆ ಸಂಬಂಧಿಸಿಫ್ಯಾಂಟ್ ಕೇಸ್ ಕೂಡಾ ಹಾಕಿದ್ದೆ. ವಿಡಿಯೋ ಬಹಿರಂಗಪಡಿಸದAತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು.
ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ನಾನು ಸಂಪರ್ಕಿಸಿದ್ದೆ. ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಪೆನ್ ಡ್ರೈವ್ನ ಲ್ಲಿ ನೀಡಿದ್ದೆ. ಆದರೆ ಚುನಾವಣೆ ವೇಳೆ ಈ ಫೋಟೋ, ವಿಡಿಯೋಗಳು ಬಹಿರಂಗಗೊAಡವು ಎಂದು ಹೇಳಿದ್ದಾನೆ.


