ಬೆಂಗಳೂರು : ಗೋಬಿ ಮಂಚೂರಿ ಕಾಟನ್ ಕ್ಯಾಂಡಿ,ಕಬಾಬ್ ,ಕೇಕ್ ಆಯಿತು ಆದರೆ ಇದೀಗ ಕರಿದ ಹಸಿರು ಬಟಾಣಿಯ ಸರದಿಕೊಟ್ಟಿದೆ. ಕ್ಯಾನ್ಸರ್ ಕಾರಕ ಅಂಶ ಇರುವ ಕಾರಣ ಗೋಬಿ ಮತ್ತು ಕಾಟನ್ ಕ್ಯಾಂಡಿ,ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಚಿಕನ್ ಕಬಾಬ್, ಫಿಶ್ ಕಬಾಬ್ ಹಾಗೂ ಕೇಕ್ ಇತರೆ ಖಾದ್ಯಗಳ ತಯಾರಿಕೆಗೆ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿಷೇಧ ವಿಧಿಸಿ ಆದೇಶ ಹೊರಡಿಸಿತ್ತು ಆದರೆ ಇದೀಗ ಸರ್ಕಾರವು ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ತಡೆಯಲು ಕ್ರಮ ಕೈಗೊಂಡಿದೆ.
ರಾಜ್ಯದ ಎಲ್ಲ ಬಾರ್ ಹಾಗೂ ವೈನ್ ಶಾಪ್ ಗಳಲ್ಲಿ ಈ ಹಸಿರು ಬಟಾಣಿ ಹೆಚ್ಚಾಗಿ ಮಾರುತ್ತಿದ್ದು ಇದರಿಂದ ಆರೋಗ್ಯಕ್ಕೆ ಹಲವು ಪರಿಣಾಮ ಉಂಟುಮಾಡಿದೆ. ಕರ್ನಾಟಕ ಆಹಾರ ಸುರಕ್ಷತಾ ಇಲಾಖೆಯು ರಾಜ್ಯಾದ್ಯಂತ ಬಟಾಣಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ. 70ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕರಿದ ಬಟಾಣಿಗಳ ಸ್ಯಾಂಪಲ್ಗಳನ್ನ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲ ವಲಯದಲ್ಲಿ ಸ್ಯಾಂಪಲ್ ಸಂಗ್ರಹಿಸಿ ಕ್ರಮಕೈಗೊಳ್ಳಲಾಗಿದ್ದು, ಲ್ಯಾಬ್ ವರದಿ ಬಂದ ಬಳಿಕ ಕಲರ್ ಅಳವಡಿಕೆ ನಿಷೇಧಿಸುವ ಆದೇಶ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.
ಕಣ್ಣಿಗೆ ಆಕರ್ಷಣೆ, ನಾಲಿಗೆಗೆ ರುಚಿ ಸಿಕ್ಕರೆ ಮನುಷ್ಯ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ. ತಿನಿಸುಗಳು ಮೊದಲು ಕಣ್ಣಿಗೆ ಆಕರ್ಷಣೀಯವಾಗಿ ಕಾಣುತ್ತವೆ. ಆಮೇಲೆ ರುಚಿ ಆಸ್ವಾಧಿಸಲು ಸೆಳೆಯುತ್ತವೆ. ರುಚಿಕರ ತಿನಿಸನ್ನು ನಾಲಿಗೆಗೆ ಇಟ್ಟರೆ ಸಾಕು, ಆಹಾ.. ಇನ್ನೂ ಬೇಕು ಎನಿಸುತ್ತದೆ. ಆದರೆ ಆರೋಗ್ಯಕ್ಕೆ? ರುಚಿಯ ಮುಂದೆ ಕೆಲವೊಮ್ಮೆ ಆರೋಗ್ಯ ಕಾಳಜಿಯೂ ಗೌಣವಾಗಿಬಿಡುತ್ತದೆ. ಚಿಕನ್ ಕಬಾಬ್ , ಫಿಶ್ ಕಬಾಬ್ ,ಕೇಕ್,ಕಾಟನ್ ಕ್ಯಾಂಡಿ ಹಾಗೂ ಇತರೆ ಖಾದ್ಯಗಳ ತಯಾರಿಕೆಗೆ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ನಿಷೇಧ ವಿಧಿಸಿದೆ. ಕೃತಕ ಬಣ್ಣಗಳ ಬಳಸುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಭಿತ್ತರವಾಗುತ್ತಿದ್ದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಕರ್ನಾಟಕದಾದ್ಯಂತ ಮಾರಾಟ ಮಾಡಲಾಗುತ್ತಿರುವ ಹಸಿರು ಬಟಾಣಿಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ವಿಶ್ಲೇಷಣೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲು ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳಿಗೆ ಸೂಚಿಸಲಾಗಿದೆ. ಬ್ಯಾನ್ ಮಾಡಿದರೂ ಹಲವು ತಿಂಡಿ ತಿನಿಸುಗಳಿಗೆ ವಿಷಕಾರಿಕ ಅಂಶಗಳನ್ನು ಬಳಸುತ್ತಿರುವುದು ಚಾಲ್ತಿಯಲ್ಲಿದೆ ಒಟ್ಟಿನಲ್ಲಿ ಅರೋಗ್ಯ ಇಲಾಖೆ ಪದೇ ಪದೇ ತಪಾಸಣೆ ನಡೆಸಿದರೆ ಆರೋಪಿಗಳು ಸಿಕ್ಕಿಬೀಳುವುದಂತೂ ಖಂಡಿತವಾಗಿದೆ.