Monday, October 20, 2025
Flats for sale
Homeಕ್ರೈಂಬೆಂಗಳೂರು : ಸಾಲ ತೀರಿಸಲು ಸ್ನೇಹಿತನ ಮನೆಯಲ್ಲಿದ್ದ ಚಿನ್ನ ಕಳ್ಳತನ,ಟೆಕ್ಕಿ ಆರೋಪಿ ಬಂಧನ..!

ಬೆಂಗಳೂರು : ಸಾಲ ತೀರಿಸಲು ಸ್ನೇಹಿತನ ಮನೆಯಲ್ಲಿದ್ದ ಚಿನ್ನ ಕಳ್ಳತನ,ಟೆಕ್ಕಿ ಆರೋಪಿ ಬಂಧನ..!

ಬೆಂಗಳೂರು : ಸಾಲ ತೀರಿಸಲು ಸ್ನೇಹಿತನ ಮನೆಗೆ ಕನ್ನ ಹಾಕಿದ್ದ ಬಿಇ ಪದವೀಧರನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 5.8೦ ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ ಜಿಲ್ಲೆಯ ನಿವಾಸಿ ಮಂಜುನಾಥ್ (38) ಬಂಧಿತ. ಆರೋಪಿಯು ಕೆ.ಆರ್.ಪುರಂನ ಅಯ್ಯ ಪ್ಪನಗರದಲ್ಲಿ ವಾಸವಾಗಿದ್ದು, ಬಿಇ ಸಿವಿಲ್ ಎಂಜಿನಿಯರ್ ಮುಗಿಸಿ ಕಂಪನಿಯೊAದರಲ್ಲಿ ಕೆಲಸ ಮಾಡುತ್ತಿದ್ದ. ಸಾಲ ಮಾಡಿಕೊಂಡಿದ್ದ ಮಂಜುನಾಥ್ ಅದನ್ನು ತೀರಿಸಲು ಕಳ್ಳತನದ ಹಾದಿ
ಹಿಡಿದಿದ್ದ. ಕೊಡಿಗೆಹಳ್ಳಿ ಗ್ರಾಮದಲ್ಲಿ ಈತನ ಸ್ನೇಹಿತ ನವೀನ್ ವಾಸವಾಗಿದ್ದ. ಆ.29 ರಂದು ಕೊಡಿಗೆಹಳ್ಳಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗೆ ಪೂಜೆ ಮಾಡಿಸಿಕೊಂಡು ಬರಲು ನವೀನ್ ಅವರ ಪತ್ನಿ ಸುಷಾ ಮನೆಗೆ ಬೀಗಹಾಕಿಕೊಂಡು ತೆರಳಿದ್ದರು.

ಈ ವೇಳೆ ಮಂಜುನಾಥ್ ಸ್ನೇಹಿತನ ಮನೆಯ ಮುಂಬಾಗಿಲನ್ನು ಒಡೆದು ಒಳನುಗ್ಗಿ ಕೊಠಡಿಯ ಕಬೋರ್ಡ್ನಲ್ಲಿಟ್ಟಿದ್ದ 5೦ ಗ್ರಾಂ ಚಿನ್ನದ ಮಾಂಗಲ್ಯ ಸರ,2೦ ಗ್ರಾಂ 2 ಚಿನ್ನದ ಬಳೆ, 35 ಗ್ರಾಂ ಕಿವಿ ಓಲೆಗಳನ್ನು ಕದ್ದು ಪರಾರಿಯಾಗಿದ್ದನು.ಸುಷ್ಮಾ ಅವರು ಪೂಜೆ ಮುಗಿಸಿ ಕೊಂಡು ವಾಪಸ್ ಮನೆಗೆ ಮರಳಿದಾಗ ಮನೆಯ ಕಬೋರ್ಡ್ನಲ್ಲಿದ್ದ ಚಿನ್ನಾಭರಣಗಳು ಕಳ್ಳತನವಾ ಗಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಆರೋಪಿ ಮಂಜುನಾಥ್‌ನನ್ನು ಆತನ ಮನೆಯಲ್ಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆರೋಪಿ ಸಾಲ ತೀರಿಸಲು ಸ್ನೇಹಿತನ ಮನೆಯಲ್ಲೇ ಚಿನ್ನವನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರಿಗೆ ಬಾಯ್ಬಿಟ್ಟಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular