Saturday, March 7, 2026
Flats for sale
Homeರಾಜ್ಯಬೆಂಗಳೂರು : ಸಾಲು ಮರದ ತಿಮ್ಮಕ್ಕನ ಆರೋಗ್ಯದಲ್ಲಿ ಏರುಪೇರು,ಆಸ್ಪತ್ರೆಗೆ ದಾಖಲು ..!

ಬೆಂಗಳೂರು : ಸಾಲು ಮರದ ತಿಮ್ಮಕ್ಕನ ಆರೋಗ್ಯದಲ್ಲಿ ಏರುಪೇರು,ಆಸ್ಪತ್ರೆಗೆ ದಾಖಲು ..!

ಬೆಂಗಳೂರು : ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 17 ದಿನಗಳಿಂದ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಅವರು ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಜಯನಗರದಲ್ಲಿರುವಂತ ಅಪೋಲೋ ಆಸ್ಪತ್ರೆಗೆ ವೃಕ್ಷಮಾತೆಯೆಂದೇ ಹೆಸರಾಗಿರುವಂತ ಸಾಲುಮರದ ತಿಮ್ಮಕ್ಕ ಅವರನ್ನು ತೀವ್ರ ಅನಾರೋಗ್ಯದ ಕಾರಣ ದಾಖಲಿಸಲಾಗಿದೆ.

ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ 113 ವರ್ಷಗಳಾಗಿದ್ದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಬಹು ಬೇಗ ಗುಣಮುಖರಾಗಿ ಬರಲಿ ಅಂತ ಅವರ ಹಿತೈಷಿಗಳು, ಅಭಿಮಾನಿಗಳು, ಕುಟುಂಬಸ್ಥರು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular