Thursday, March 12, 2026
Flats for sale
Homeರಾಜ್ಯರಾಯಚೂರು : ಸರಕಾರದಿಂದ ದೇವಸ್ಥಾನ,ಮಠಗಳನ್ನು ಮುಕ್ತಗೊಳಿಸಿ : ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಒತ್ತಾಯ .

ರಾಯಚೂರು : ಸರಕಾರದಿಂದ ದೇವಸ್ಥಾನ,ಮಠಗಳನ್ನು ಮುಕ್ತಗೊಳಿಸಿ : ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಒತ್ತಾಯ .

ರಾಯಚೂರು : ತಿರುಪತಿ ಲಡ್ಡು ವಿವಾದದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿರುವ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು ಮಠಮಾನ್ಯಗಳು, ದೇವಾಲಯಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಿ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಲಿ ಎಂದು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯದ ಪೂರ್ವದಲ್ಲಿ ಆಯಾ ಮಠ ಮಾನ್ಯಗಳು ಅದರ ಭಕ್ತರು, ಶಿಷ್ಯರು ಹಾಗೂ ಆಯಾ ಸಮುದಾಯದ ನೇತೃತ್ವದಲ್ಲಿ ಅವುಗಳ ನಿರ್ವಹಣೆ ನಡೆಯುತ್ತಿತ್ತು. ಲೌಖಿಕ ಕಾನೂನುಗಳು ಬಂದ ನಂತರ ಇದೆಲ್ಲ ಸರ್ಕಾರದ ವಶಕ್ಕೆ ಹೋಗಿದೆ. ಸರ್ಕಾರ ಹಾಗೂ ರಾಜಕೀಯದಿಂದ ತೊಂದರೆ ಆಗ್ತಿದೆ, ಸ್ವಾತಂತ್ರ್ಯದ ಪೂರ್ವದಲ್ಲಿ ಆಯಾ ಮಠ ಮಾನ್ಯಗಳು ಅದರ ಭಕ್ತರು, ಶಿಷ್ಯರು ಹಾಗೂ ಆಯಾ ಸಮುದಾಯದ ನೇತೃತ್ವದಲ್ಲಿ ಅವುಗಳ ನಿರ್ವಹಣೆ ನಡೆಯುತ್ತಿತ್ತು. ಲೌಖಿಕ ಕಾನೂನುಗಳು ಬಂದ ನಂತರ ಇದೆಲ್ಲ ಸರ್ಕಾರದ ವಶಕ್ಕೆ ಹೋಗಿದೆ. ಒಂದು ಭಾಗದಲ್ಲಿರುವ ಮಠ, ಮಾನ್ಯಗಳು, ಆಯಾ ಭಾಗದ ಭಕ್ತರು, ಆ ಪ್ರಾಂತ್ಯದ ನೇತೃತ್ವದಲ್ಲಿ ನಡೆಯಬೇಕು. ಅದಕ್ಕೆ ಸನಾತನ ಧರ್ಮ ಪರಿರಕ್ಷಣಾ ಸಂಬಂಧವಾದಂತಹ ಒಂದು ಯೋಜನೆಯನ್ನು ನಾವು ಬೆಂಬಲಿಸುತ್ತೇವೆ. ನಮ್ಮೂರಿನ ದೇವಾಲಯಗಳ, ನಮ್ಮೂರಿನ ಪದ್ಧತಿಗಳ ಬಗ್ಗೆ ಎಲ್ಲಿಯೋ ಇದ್ದವರು, ಬೇರೆ ಯಾರೋ ಬಂದು ಹೇಳುವುದು ಅಲ್ಲ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ಸಮುದಾಯದ ವಿಧ್ವಾಂಸರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ನಡೆಯಬೇಕು. ಮುಜರಾಯಿ ಇಲಾಖೆಯಿಂದ ಖಂಡಿತ ಮುಕ್ತಗೊಳಿಸಬೇಕು. ಈ ಮುಜರಾಯಿ ಇಲಾಖೆಯಿಂದ ಮಠಮಾನ್ಯಗಳು, ದೇವಸ್ಥಾನಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳು ಮುಕ್ತವಾಗಬೇಕು ಎಂದು ನಾವು ಒಕ್ಕರಣೆಯಿಂದ ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ದೇಗುಲದಲ್ಲಿ ಸಮಸ್ಯೆ, ದೋಷ ಆದಾಗ ಸರ್ಕಾರ ಪರಿಶೀಲಿಸಬೇಕು. ಸುಮೋಟೋ ಹಾಕಿ ಅದನ್ನು ಸರಿಪಡಿಸುವ ಕೆಲಸವಷ್ಟೇ ಮಾಡಬೇಕು. ದೇಗುಲದ ವಿಚಾರದಲ್ಲಿ ಸರ್ಕಾರ ತಲೆಹಾಕವುದು, ಪಾವಿತ್ರ್ಯತೆ, ಸಂಪ್ರದಾಯಗಳನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಅಂಬೇಡ್ಕರ್​ ಅವರು ನಮಗೆ ಸಂವಿಧಾನವನ್ನು ನೀಡಿದ್ದಾರೆ. ಆ ಪವಿತ್ರ ಗ್ರಂಥದಲ್ಲಿ ಇಂತಹುದಕ್ಕೆ ಅವಕಾಶ ಇಲ್ಲ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದರು.ಪ್ರಸ್ತುತ ಆಂಧ್ರ ಮುಖ್ಯಮಂತ್ರಿಗಳು ಈ ಬಗ್ಗೆ ಸಿರಿಯಸ್ ಆಗಿ ವಿಚಾರಣೆ ನಡೆಸಿದ್ದಾರೆ. ಯಾರೇ ಮಾಡಿದ್ದರು, ಏನೇ ಮಾಡಿದ್ರು ಖಂಡನೀಯ. ಭಕ್ತರ ಶ್ರದ್ಧಾಕೇಂದ್ರದಲ್ಲಿ ಆಗಿದ್ದು ಹೇಯಕೃತ್ಯ, ಅಪಚಾರ. ಪ್ರಸಾದದಲ್ಲಿ ಈ ರೀತಿ ನಡೆದಿದ್ದನ್ನ ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular