ಬೆಂಗಳೂರು : ತಂತ್ರಜ್ಞಾನ ಬದಲಾಗುತ್ತಿದ್ದಂತೆ ಎಲ್ಲಾ ವ್ಯವಸ್ಥೆಗಳಲ್ಲಿ ಬದಲಾವಣೆ ಯಾಗುತ್ತದೆ ಎಂಬುದು ನಿಜವಾದ ವಿಚಾರ . ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ರಾಜ್ಯ ಸಂಚಾರ ಪೊಲೀಸರು ಮ್ಯಾನ್ಯುಯುಲ್ ಮೂಲಕ ದಂಡ ಬರೆದುಕೊಡುವ ರಸೀದಿ ವ್ಯವಸ್ಥೆಗೆ ಇತಿಶ್ರೀ ಹಾಡಿ ಇ-ಚಲನ್ ವ್ಯವಸ್ಥೆ ಜಾರಿಗೊಳಿಸಿದೆ.
ಇ-ಚಲನ್ ದಂಡ ವ್ಯವಸ್ಥೆಗೆ ನಿನ್ನೆ ಚಾಲನೆ ಇಲಾಖೆ ಚಾಲನೆ ನೀಡಿದ್ದು,ಈ ಮೂಲಕ ಕರ್ನಾಟಕ ಶೇ 100 ರಷ್ಟು ಪೇಪರ್?ಲೆಸ್ ವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇ-ಚಲನ್ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಸಂಚಾರ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ, ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಮತ್ತು ಕಾಗದ ರಹಿತ ಕೆಲಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ರಾಜ್ಯ ಪೊಲೀಸ್ ಇಲಾಖೆಯು ಎಸ್‌ಬಿಐ ಬ್ಯಾಂಕ್‌ನ ಜೊತೆ ಸಹಯೋಗ ಮಾಡಿಕೊಂಡಿದ್ದು,ಸಾರ್ವಜನಿಕರು ಕಟ್ಟುವ ದಂಡ ನೇರವಾಗಿ ಇಲಾಖೆಯ ಅಕೌಂಟ್‌ಗೆ ಹೋಗುತ್ತದೆ. ಮತ್ತು ರಾಜ್ಯದಾದ್ಯಂತ 722 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು ಮತ್ತು 64 ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ 1766 ಇ-ಚಲನ್ ಯಂತ್ರಗಳನ್ನು ನೀಡಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸುವವರು ಯುಪಿಐ, ಡೆಬಿಟ್ ಕಾರ್ಡ್ ಮತ್ತು ನಗದು ಪಾವತಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ದಂಡವನ್ನು ಕಟ್ಟಬಹುದು. ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರಾರಂಭವಾದ ಈ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗಿದೆ.
ಕುಡಿದು ವಾಹನ ಚಲಾಯಿಸುವ ಅಥವಾ ವಿಶೇಷ ಡ್ರೈವ್ ಗಳ ಅಡಿಯಲ್ಲಿ ನಿಯಮ ಉಲ್ಲಂಘಿಸುವವರು ಲಿಂಕ್ ಮೂಲಕ ಏಳು ದಿನಗಳಲ್ಲಿ ವರ್ಚುವಲ್ ಆಗಿ ದಂಡವನ್ನು ಪಾವತಿಸಬಹುದು. ಈ ಹಣ ಇಲಾಖೆಯ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತದೆ.
ಈ ಮೂಲಕ ಎಲ್ಲ ಸಂಚಾರ ಪೊಲೀಸ್ ಠಾಣೆಗಳು ಪೇಪರ್‌ಲೆಸ್ ಆಗುತ್ತವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಜೊತೆಗೆ ಮುಂದಿನ ದಿನಗಳಲ್ಲಿ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಸುಧಾರಿತ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಇ-ಚಲನ್ ಸಾಧನಗಳನ್ನು ಸಂಯೋಜಿಸುವ ಯೋಜನೆ ಇದೆ ಎಂದು ಹೇಳಿದರು.