Tuesday, November 4, 2025
Flats for sale
Homeರಾಜಕೀಯಬೆಂಗಳೂರು : ಸಂಘದ ಮುಖ್ಯಸ್ಥರಿಗೆ ಪ್ರಧಾನಿಗೆ ಕೊಡುವಂತಹ ಭದ್ರತೆ ಯಾಕೆ,ಹಣ ಎಲ್ಲಿಂದ ಬರುತ್ತೆ ಎಂದು ಪ್ರಿಯಾಂಕ್...

ಬೆಂಗಳೂರು : ಸಂಘದ ಮುಖ್ಯಸ್ಥರಿಗೆ ಪ್ರಧಾನಿಗೆ ಕೊಡುವಂತಹ ಭದ್ರತೆ ಯಾಕೆ,ಹಣ ಎಲ್ಲಿಂದ ಬರುತ್ತೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ…!

ಬೆಂಗಳೂರು : ಬಿಜೆಪಿಯವರು ಆರ್‌ಎಸ್‌ಎಸ್‌ನ ಗುಲಾಮರು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಅಧಿಕೃತವಾಗಿ ನೋಂದಾಯಿತ ಸಂಸ್ಥೆಯಲ್ಲ ಎAದು ಲಿಖಿತವಾಗಿ ಅಧಿಕೃತವಾಗಿ ತಿಳಿಸಲಾಗಿದೆ. ಅದು ನಿಜವಾಗಿಯೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು? ಎಂದೂ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಿAದ ಪಥಸಂಚಲನ ಜಟಾಪಟಿ ನಡೀತಿದೆ. ಒಂದು ತಿಂಗಳ ನಂತರ ಅದರ ಮುಖ್ಯಸ್ಥರು ಮಾತಾಡಿದ್ದಾರೆ. ಆದರೆ, ಬಿಜೆಪಿಯವರು ಒಂದು ತಿಂಗಳಿAದ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಪರ ಮಾತಾಡದಿದ್ದರೆ ಬಿಜೆಪಿ ನಾಯಕರಿಗೆ ಟಿಕೆಟ್ ಸಿಗಲ್ಲ. ಬಿಜೆಪಿ ರಾಷ್ಟಿçÃಯ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ ಯಾಕೆ? ಆರ್‌ಎಸ್‌ಎಸ್ ಅನುಮತಿ ಕೊಟ್ಟಿಲ್ಲವೇ? ಎಂದು ಲೇವಡಿ ಮಾಡಿದರು. ಖಾಸಗಿ ಜಾಗ, ನಿಮ್ಮವರ ಒಡೆತನದ ಜಾಗಗಳಲ್ಲಿ ಪಥಸಂಚಲನ ಮಾಡಿಕೊಳ್ಳಿ. ದೇಶ ಸಂಸ್ಕöÈತಿ, ಐಕ್ಯತೆಗೆ ದುಡಿಯುತ್ತಿದ್ದರೆ ಇದೆಲ್ಲ ಅಗತ್ಯ ಏನು? ದೊಣ್ಣೆ ಹಿಡಿದುಕೊಂಡೇ ಏಕೆ ಪಥಸಂಚಲನ ಮಾಡಬೇಕು? ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಿಗೆ ವೇತನ ಅಥವಾ ಗೌರವಧನ ಕೊಡುತ್ತಿದ್ದಾರಲ್ಲ, ಹೇಗೆ, ಹಣಕಾಸಿನ ಮೂಲ ಯಾವುದು? ಆರ್‌ಎಸ್‌ಎಸ್‌ನಲ್ಲಿ ಪಾರದರ್ಶಕತೆ ಯಾಕಿಲ್ಲ? ಯಾಕೆ ರಹಸ್ಯ ಕಾಪಾಡ್ತಾರೆ? ಆದಾಯ, ದೇಣಿಗೆ ಯಾರು ಕೊಡ್ತಾರೆ? ಎಲ್ಲಿಂದ ಬರುತ್ತೆ? ನಿತ್ಯದ ಖರ್ಚುಗಳನ್ನು ಆರ್‌ಎಸ್‌ಎಸ್ ಹೇಗೆ ನಿರ್ವಹಿಸುತ್ತೆ? ಇದನ್ನೆಲ್ಲ ನಾವು ಕೇಳಬಾರದಾ? ಎಂದು ಗುಡುಗಿದರು.

ಪೂರ್ಣ ಸಮಯದ ಪ್ರಚಾರಕರು ಮತ್ತು ಪ್ರಮುಖರಿಗೆ ಯಾರು ವೇತನ ಪಾವತಿಸುತ್ತಾರೆ ಮತ್ತು ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳು ಮತ್ತು “ಸಾಮಾಜಿಕ” ಅಭಿಯಾನಗಳಿಗೆ ಯಾರು ಹಣಕಾಸು ಒದಗಿಸುತ್ತಾರೆ? ಆರ್‌ಎಸ್‌ಎಸ್ ನೋಂದಾಯಿಸದಿದ್ದರೆ ಮತ್ತು ಲೆಕ್ಕಪತ್ರವಿಲ್ಲದವರಾಗಿದ್ದರೆ, ರಾಷ್ಟçಕ್ಕೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾ ಪರಿಶೀಲನೆ ಮತ್ತು ತೆರಿಗೆಗಳನ್ನು ತಪ್ಪಿಸುತ್ತಿಲ್ಲವೇ? ಇದು ಅವರನ್ನು ದೇಶ ಭಕ್ತ ರನ್ನಾಗಿ ಹೇಗೆ ಮಾಡುತ್ತದೆ,ಎಂದು ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular