ಬೆಂಗಳೂರು : ಕೇಂದ್ರ ಸರ್ಕಾರದ ಅಧೀನದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಸಕ್ತ ಅಂತ್ಯಗೊAಡ ತ್ರೈ ಮಾಸಿಕದಲ್ಲಿ ದಾಖಲೆಯ ನಿವ್ವಳ ಲಾಭಗಳಿಸಿದೆ. 12,೦63 ಕೋಟಿ ರೂ. ನಿವ್ವಳ ಲಾಭಗಳಿಸಿ ಶೇ.130.5ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ಘೋಷಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.7.8ರಷ್ಟು ಲಾಭ ಗಳಿಸಿತ್ತು. ಅದೇ ರೀತಿ 32,೦25 ಕೋಟಿ ರೂ. ನಿವ್ವಳ ಬಡ್ಡಿ ಬಂದಿದ್ದು ಶೇ.7.೮ರಷ್ಟು ಬೆಳವಣಿಗೆ ಸಾಧಿಸಿದೆ. ಬ್ಯಾಂಕಿನ ಒಟ್ಟು ಆದಾಯ ಅಂತ್ಯಗೊAಡ ತ್ರೈ ಮಾಸಿಕ ಅವಧಿಯಲ್ಲಿ 34,752 ಕೋಟಿ ತಲುಪಿದೆ. ವರ್ಷದಿಂದ ವರ್ಷಕ್ಕೆ 1,೦1,365 ಕೋಟಿ ರೂ. ಅಂದರೆ ಶೇ.16.೦ರಷ್ಟು ಹಾಗೂ 15.3ರಷ್ಟು ಬೆಳವಣಿಗೆ ದಾಖಲಿಸಿದೆ.
2025 ಹಣಕಾಸು ವರ್ಷದ ಮೂರನೇ ತ್ರೆöÊಮಾಸಿಕದಲ್ಲಿ ಬಡ್ಡಿಯೇತರ ಆದಾಯ 3,412 ಕೋಟಿ ರೂ. ಮತ್ತು ಕಳೆದ ವರ್ಷ 1,1593 ಕೋಟಿ ಆಗಿದ್ದು, ವರ್ಷದಿಂದ ವರ್ಷಕ್ಕೆ ಕ್ರಮವಾಗಿ ಶೇ.27.6ರಷ್ಟು ಮತ್ತು ಶೇ.26.9 ರಷ್ಟು ಬೆಳವಣಿಗೆ ದಾಖಲಿಸಿದೆ. 2025 ಹಣಕಾಸು ವರ್ಷದ ಮೂರನೇ ತ್ರೆöÊಮಾಸಿಕದಲ್ಲಿ ಒಟ್ಟು ಬಡ್ಡಿ ವೆಚ್ಚಗಳು 20,308 ಕೋಟಿ ಮತ್ತು 57,746 ಕೋಟಿ ಆಗಿದ್ದು, ವರ್ಷದಿಂದ ವರ್ಷಕ್ಕೆ ಕ್ರಮವಾಗಿ ಶೇ.19.5 ರಷ್ಟು ಮತ್ತು 17.7 ರಷ್ಟು ಹೆಚ್ಚಾಗಿದೆ. 2025 ರ ಹಣಕಾಸು ವರ್ಷದ ಮೂರನೇ ತ್ರೈ ಮಾಸಿಕದಲ್ಲಿ ನಿರ್ವಹಣಾ ವೆಚ್ಚಗಳು 7,824 ಕೋಟಿ ಹಾಗೂ 23,564 ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಕ್ರಮವಾಗಿ ಶೇ.17.9 ಮತ್ತು ಶೇ.15.8ರಷ್ಟು ಹೆಚ್ಚಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.