ಬೆಂಗಳೂರು : ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದು ಪಾಪ ಕಳೆದುಕೊಳ್ಳಲು ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟಿದ್ದ ಪಾಪಿ ಪತಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಾಂತಿನಗರದ ಸಿದ್ದರಾಮಣ್ಣ ಬಂಧಿತ ಆರೋಪಿಯಾಗಿದ್ದಾನೆ,ಆರೋಪಿ ಹಾಗೂ ಆತನ ಪತ್ನಿ ಕೋಕಿಲಾ ವಾಸವಾಗಿದ್ದರು. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಕೋಕಿಲಾ ಮೇಲೆ ಸಿದ್ದರಾಮಣ್ಣನಿಗೆ ಅನುಮಾನ ಮೂಡಿತ್ತು. ಹೀಗಾಗಿ ಪತ್ನಿ ಶೀಲ ಶಂಕಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಕುಟುಂಬಸ್ಥರು ಎಷ್ಟೇ ಬುದ್ದಿ ಹೇಳಿದರೂ, ಆರೋಪಿ ಸಿದ್ದರಾಮಣ್ಣ ಪತ್ನಿ ಜೊತೆ ಜಗಳ ಮುಂದುವರೆಸಿದ್ದು ಕಳೆದ ಅ. 28 ರ
ರಾತ್ರಿ ಕೂಡ ಇದೇ ವಿಚಾರಕ್ಕೆ ಹೆಂಡತಿ ಜೊತೆ ಜಗಳ ಉಂಟಾಗಿತ್ತು. ಕೋಪದ ಬರದಲ್ಲಿ ಕೋಕಿಲಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿ, ಆರೋಪಿ ಸಿದ್ದರಾಮಣ್ಣ ಪರಾರಿಯಾಗಿದ್ದ. ಈ ಬಗ್ಗೆ ಮೃತ ಕೋಕಿಲಾ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಕೊಲೆ ಕೇಸ್ ದಾಖಲಿಸಿ ಕಾರ್ಯಾಚರಣೆ ನಡೆಸಿ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.