ಬೆಂಗಳೂರು : ಈ ಸರಕಾರ ಬಿಟ್ಟಿ ಭಾಗ್ಯಗಳಿಂದ ಬಂದದ್ದು ಅಂತೂ ನಿಜ ಆದರೆ ಇಂತಹ ಯೋಜನೆಯಿಂದ ಜನಸಾಮನ್ಯರಿಗೆ ಹೊರೆ ಹೆಚ್ಚು ಅಂತೂ ನಿಜವಾದ ವಿಷಯ ,ಆದರೆ ಅಧಿಕಾರದ ದಾಹಕ್ಕೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಂತೆ ಈ ಭಾಗ್ಯ ಕೂಡ ,ಯಾಕೆಂದರೆ ಅಧಿಕಾರದಲ್ಲಿ ಇರುವವರು ಅಂತೂ ಲೂಟಿ ಹೊಡೆದು ಹೋಗ್ತಾರೆ ಇವರು ಮಾಡಿದ ಕರ್ಮವನ್ನು ಜನಸಾಮನ್ಯರು ಅನುಭವಿಸುವುದು ನಿಜವಾದ ವಿಷಯ . ಶಕ್ತಿ ಯೋಜನೆಯಲ್ಲಿ ಪ್ರಯಾಣಿಸಿದ ಉಚಿತ ಟಿಕೆಟ್ ಮೌಲ್ಯ ಬರೋಬ್ಬರಿ 3000 ಕೋಟಿ,ಈ ಗ್ಯಾರಂಟಿ ಯೋಜನೆಯಿಂದ ಜನಸಾಮಾನ್ಯರಿಗೆ ಬರೆ ಉಂಟಾಗಿದ್ದು ಮುಂದೆ ಸರಕಾರವೇ ನಷ್ಟದ ಹೊಣೆ ಹೊರಿಸಲಿದೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಲ್ಲಿಯೇ ಅತ್ಯಂತ ಯಶಸ್ವಿಯಾಗಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಭರಪೂರ ಸ್ಪಂದನೆ ಸಿಕ್ಕಿದೆ. ಆರಂಭವಾದಲ್ಲಿAದ ಇಲ್ಲಿಯವರೆಗೂ ನಿತ್ಯವೂ ಮಹಿಳಾ ಪ್ರಯಾಣಿಕರ ಸಂಖ್ಯೆ 50 ಲಕ್ಷಕ್ಕಿಂತ ಕಡಿಮೆಯಾಗದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಜೂನ್ 11 ರಂದು ಆರಂಭವಾದ ಶಕ್ತಿ ಯೋಜನೆಯಡಿ ಇದುವರೆಗೂ ರಾಜ್ಯದ 4 ಸಾರಿಗೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟಾರೆ125.73 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇವರಿಗೆ ವಿತರಿಸಿರುವ ಉಚಿತ ಟಿಕೆಟ್ ಮೌಲ್ಯವೇ ಬರೋಬ್ಬರಿ 3000 ಕೋಟಿ ರೂಗಳಿಗೂ ಅಧಿಕವಾಗಿದೆ.
ಕೆಎಸ್ಆರ್ಟಿಸಿಯಲ್ಲಿ ಒಟ್ಟು 37.76 ಕೋಟಿ ಮಹಿಳೆಯರು ಸಂಚರಿಸಿದ್ದರೆ, ಬಿಎಂಟಿಸಿಯಲ್ಲಿ ಅತ್ಯಧಿಕ 50.51 ಕೋಟಿ, ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ 29.50 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 17.14 ಕೋಟಿ ಸಂಚರಿಸಿದ್ದಾರೆ.
ಉಚಿತ ಟಿಕೆಟ್ ಮೌಲ್ಯ ಕೆಎಸ್ಆರ್ಟಿಸಿಗೆ ಗರಿಷ್ಠ 1127.75 ಕೋಟಿ ಆದಾಯ ಬಂದಿದ್ದರೆ, ಬಿಎಂಟಿಸಿಗೆ 522.60 ಕೋಟಿ, ವಾಯುವ್ಯ ಸಾರಿಗೆಗೆ 752.35 ಕೋಟಿ ರೂ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ೬೦೩.೦೮ ಕೋಟಿ ರೂಗಳಷ್ಟು ಆದಾಯ ಬಂದಿದೆ. ರಾಜ್ಯದಲ್ಲಿ ಜೂನ್11 ರಿಂದ ಈವರೆಗೆ ಸಾರಿಗೆ ನಿಗಮದ ಬಸ್ಗಳಲ್ಲಿ 221.87 ಕೋಟಿ ಪ್ರಯಾಣಿಕರು ಸಂಚರಿಸಿದ್ದರೆ ಈ ಪೈಕಿ ಮಹಿಳೆಯರೇ 125.73 ಕೋಟಿಯಷ್ಟಾಗಿದ್ದಾರೆ.


