ಬೆಂಗಳೂರು : ವ್ಯಕ್ತಿಯನ್ನು ಅಪಹರಿಸಿ ೫ ಲಕ್ಷ ಹಣ ಪಡೆದ ಕಿರಾತಕರು ಬಳಿಕ ಆತನನ್ನು ಕೊಲೆಗೈದು ಕಾಡು ಪ್ರಾಣಿಗಳಿಗೆ ಆಹಾರವಾಗಲೆಂದು ಎಸೆದು ಪರಾರಿಯಾಗಿದ್ದ ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿಯ ಸಂಜಯ್, ಆನAದ್‌ನನ್ನು ಬಂಧಿಸಿದ್ದು ತಿಮ್ಮ, ಹನುಮಂತ ತಲೆಮರಿಸಿಕೊAಡಿದ್ದಾರೆ. ಈ ನಾಲ್ವರು ಹೊಸ ವರ್ಷದ ಪಾರ್ಟಿಗಾಗಿ ಪರಿಚಿತವಿದ್ದ ಗುರುಸಿದ್ದಪ್ಪರನ್ನು ತಾವಿದ್ದ ಸ್ಥಳಕ್ಕೆ ಕರೆಸಿಕೊಂಡು ಅಪಹರಿಸಿದ್ದಾರೆ. ಬಳಿಕ ಆತನ ಪತ್ನಿಗೆ ಕರೆ ಮಾಡಿ ೫ ಲಕ್ಷ ರೂ. ತರಲು ಹೇಳಿದ್ದಾರೆ.
ಹಣವನ್ನು ಪಡೆದ ನಂತರ ಆತನನ್ನು ಬಿಟ್ಟು ಕಳುಹಿಸದೇ ಕಾರಿನಲ್ಲಿ ಮಂಚನಬೆಲೆ ಡ್ಯಾಮ್ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಮಂಚನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದ ನಾಲ್ವರು, ಡಿ.೩೦ರ ರಾತ್ರಿಪಾರ್ಟಿ ಮಾಡಿ ಗುರುಸಿದ್ದಪ್ಪನನ್ನು ಬಿಟ್ಟು ಕಳುಹಿಸುವುದಾಗಿ ಹೇಳಿದ್ದರು. ಆದರೆ ಅವರನ್ನು ಬಿಡುಗಡೆ ಮಾಡಿದರೆ ಪೊಲೀಸರಿಗೆ ಹೇಳುತ್ತಾನೆ ಎಂದು ಹೆದರಿ ಕೊಲೆ ಮಾಡಿದ್ದಾರೆ.
ಬಳಿಕ ಮೃತದೇಹವನ್ನು ಕಾಡಿನಲ್ಲಿಯೇ ಬಿಸಾಡಿ, ಅಲ್ಲಿಂದ ಹೊಸ ವರ್ಷಕ್ಕಾಗಿ ಗೋವಾಕ್ಕೆ ತೆರಳಿದ್ದಾರೆ. ಇತ್ತ ಗುರುಸಿದ್ದಪ್ಪ ಪತ್ನಿ ತನ್ನ ಪತಿ ಹಣ ಪಡೆದುಕೊಂಡು ಹೋದವರು ಮನೆಗೆ ವಾಪಸ್ ಬಂದಿಲ್ಲ ಎಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ಮಾಡುವಾಗ ಕೊಲೆಯಾಗಿರುವುದು ತಿಳಿದುಬಂದಿದೆ. ಇತ್ತ ಮಂಚನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಪೊಲೀಸರಿಗೆ ಮೃತದೇಹ ಪತ್ತೆಯಾಗಿದ್ದು ಕಾಡು ಪ್ರಾಣಿಗಳು ಗುರುಸಿದ್ದಪ್ಪನ ದೇಹವನ್ನು ಎಳೆದುಕೊಂಡು ಹೋಗಿ ತಿಂದುಹಾಕಿವೆ. ಇನ್ನು ದೇಹದಲ್ಲಿ ತಲೆಬುರುಡೆ ಮತ್ತು ಬೆನ್ನೆಲುಬಿನ ಮೂಳೆಗಳು ಮಾತ್ರ ಲಭ್ಯವಾಗಿವೆ. ಗುರುಸಿದ್ದಪ್ಪನ ಅಳಿದುಳಿದ ಮೃತದೇಹದ ಭಾಗಗಳನ್ನು ಸಂಗ್ರಹಿಸಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.


