ಬೆಂಗಳೂರು : ಕರ್ನಾಟಕ ಶಿಕ್ಷಣ ಇಲಾಖೆ 5, 8, 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. SSLC ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ. ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ 25ನೇ ತಾರೀಕಿನಿಂದ ಬೋರ್ಡ್ ಎಕ್ಸಾಮ್ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.ಇನ್ನು, ಉಳಿದ ದಿನ ಮಧ್ಯಾಹ್ನ ಅವಧಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರಿಗೆ ಇದ್ದ ಆತಂಕ ದೂರ ಮಾಡಿದೆ.
25ನೇ ತಾರೀಕಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ.
ಬೋರ್ಡ್ ಎಕ್ಸಾಮ್ ಟೈಮ್ ಟೇಬಲ್ ಹೀಗಿದೆ..!
5, 8, 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ
5ನೇ ತರಗತಿ
ಮಾರ್ಚ್ 25- ಪರಿಸರ ಅಧ್ಯಯನ
ಮಾರ್ಚ್ 26- ಗಣಿತ
8ನೇ ತರಗತಿ
ಮಾರ್ಚ್ 25- ತೃತೀಯ ಭಾಷೆ
ಮಾರ್ಚ್ 26- ಗಣಿತ
ಮಾರ್ಚ್ 27- ವಿಜ್ಞಾನ
ಮಾರ್ಚ್ 28- ಸಮಾಜ ವಿಜ್ಞಾನ
9ನೇ ತರಗತಿ
ಮಾರ್ಚ್ 25- ತೃತೀಯ ಭಾಷೆ
ಮಾರ್ಚ್ 26- ಗಣಿತ
ಮಾರ್ಚ್ 27- ವಿಜ್ಞಾನ
ಮಾರ್ಚ್ 28- ಸಮಾಜ ವಿಜ್ಞಾನ


