ಬೆಂಗಳೂರು : ಇಡೀ ರಾಷ್ಟ್ರವೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ಜರುಗಿರುವ ಲವ್ ಜಿಹಾದ್ ಪ್ರಕರಣದಲ್ಲಿ ಕೇರಳದ ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಕರೆತಂದ ಶ್ರೀಮಂತ ಯುವಕನೋರ್ವ ಮತಾಂತರಗೊಳಿಸಿ ಅತ್ಯಾಚಾರ ಎಸಗಿ, ನಂತರ ಸೌದಿಯ ಶೇಖ್‌ಗಳಿಗೆ ಸರದಿ ರೂಪದಲ್ಲಿ ಮಾರಾಟ ಮಾಡಿರುವ ಪೈಶಾಚಿಕ ಪ್ರಕರಣ ಬೆಳಕಿಗೆ ಬಂದಿದೆ.
‘ಎನ್‌ಐಎ’ ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಡೈಮಂಡ್ ಡಿಸ್ಟಿಕ್ಸ್ ವಸತಿ ಸಮುಚ್ಚಯಕ್ಕೆ ನುಗ್ಗಿ ನಡೆಸಿದ ಮಿಂಚಿನ ಕಾರ್ಯಾ ಚರಣೆಯಲ್ಲಿ ಕಲಬುರಗಿಯ ವಾಣಿಜ್ಯ ತೆರಿಗೆ ಡೆಪ್ಯೂಟಿ ಕಮೀಷನರ್ (ಡಿಸಿ) ಇರ್ಷಾದ್ ಖಾನ್ ಪತ್ನಿಯ ಕೈವಾಡವೂ ಬಯಲಾಗಿದೆ. ಅಧಿಕಾರಿಯ ಬೆಂಗಳೂರು ನಿವಾಸದಲ್ಲಿ ಎಂಟು ಲ್ಯಾಪ್‌ಟಾಪ್. 12 ಮೊಬೈಲ್ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಲವ್ ಜಿಹಾದ್ ಜಾಲವನ್ನು ಅಧಿಕಾರಿಗಳು ಬಯಲು ಮಾಡಿದ್ದಾರೆ.
ಕೇರಳದಿಂದ ಬೆಂಗಳೂರಿಗೆ ಕಲಿಯಲು ಬಂದಿದ್ದ ವಿದ್ಯಾರ್ಥಿನಿಯನ್ನು ಪ್ರೇಮದ ರೂಪದಲ್ಲಿ ಸೆಳೆದುಕೊಂಡಿದ್ದ ನಜೀರ್ ಎಂಬಾತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮತಾಂತರಗೊಳಿಸಿದ್ದ. ತದನಂತರ ಕಲಬುರಗಿಯಲ್ಲಿ ವಾಣಿಜ್ಯ ತೆರಿಗೆ ಡೆಪ್ಯೂಟಿ ಕಮೀಷನರ್ ಆಗಿರುವ ಇರ್ಷಾದ್ ಖಾನ್ ಮನೆಯಲ್ಲಿ ಸುಮಾರು ಹದಿನೈದು ದಿನಗಳ ಕಾಲ ಕೂಡಿ ಹಾಕಿ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಇಷ್ಟಕ್ಕೆ ಸುಮ್ಮನಾಗದೆಯೇ ಸೌದಿ ಅರೇಬಿಯಾಕ್ಕೂ ಕೊಂಡೊಯ್ದು ಅಲ್ಲಿನ ಶೇಟ್‌ಗಳಿಗೂ ಸರದಿ ಮೇಲೆ ಮಾರಾಟ ಮಾಡಿದ್ದ. ಈ ಸಂದರ್ಭದಲ್ಲಿ ಹತಾಶಗೊಂಡಿದ್ದ ಯುವತಿಯು ಅಕಸ್ಮಾತಾಗಿ ಸಿಕ್ಕ ಮೊಬೈಲ್ ಮೂಲಕ ತಮ್ಮ ಮನೆಯವರಿಗೆ ಎಸ್‌ಎಂಎಸ್ ಮೂಲಕ ವಿಷಯ ತಿಳಿಸಿದ್ದಳು ಎನ್ನಲಾಗಿದೆ.
ವಿಷಯ ಅರಿತ ಆಕೆಯ ಪೋಷಕರು ಎನ್‌ಐಎಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ‘ಎನ್‌ಐಎ’ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ನಜೀರ್ ಸಿಕ್ಕಿಬಿದ್ದಿದ್ದು, ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ. ದಾಳಿ ಸಂದರ್ಭದಲ್ಲಿ ಅಧಿಕಾರಿ ಮನೆಯಿಂದ 12 ಮೊಬೈಲ್. ಎಂಟು ಲ್ಯಾಪ್ಟಾಪ್ ಸೇರಿದಂತೆ ಹಲವಾರು ಬೆಲೆ ಬಾಳುವ ವಸ್ತುಗಳನ್ನು ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಯ ಪತ್ನಿ ಕುಮ್ಮಕ್ಕಿನಿಂದಲೇ ಈ ಕೃತ್ಯ ಎಸಗಿರುವುದಾಗಿಯೂ ನಜೀರ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.