Saturday, March 14, 2026
Flats for sale
Homeರಾಜಕೀಯಬೆಂಗಳೂರು : ಲಿಂಗಾಯಿತ ಪ್ರಭಾವಿ ನಾಯಕ ಬಿ .ವೈ ವಿಜಯೇಂದ್ರ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನೇಮಕ.

ಬೆಂಗಳೂರು : ಲಿಂಗಾಯಿತ ಪ್ರಭಾವಿ ನಾಯಕ ಬಿ .ವೈ ವಿಜಯೇಂದ್ರ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನೇಮಕ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪಕ್ಷದ ನಾಯಕತ್ವ ಬದಲಾಯಿಸುವ ಬಗ್ಗೆ ಪಕ್ಷದೊಳಗೆ ಜೋರಾಗಿ ಚರ್ಚೆ ನಡೆದಿತ್ತು ,ಆದರೆ ಬಿ,ಸ್ ಯೆಡಿಯೂರಪ್ಪ ರವರ ಪುತ್ರ ಬಿ .ವೈ ವಿಜಯೇಂದ್ರ ರವರನ್ನು ಕರ್ನಾಟಕ ಬಿ.ಜೆ .ಪಿ ಪಕ್ಷದ ರಾಜ್ಯಾದ್ಯಕ್ಷನಾಗಿ ಬಿ ಜೆ ಪಿ ಹೈ ಕಂಮೊಂಡ್ ಆಯ್ಕೆ ಮಾಡಿದೆ.

ನಾಯಕರ ವಲಯದಲ್ಲೂ, ಕಾರ್ಯಕರ್ತರಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದ್ದು, ರಾಜ್ಯ ಘಟಕ ರಥಕ್ಕೆ ಹೊಸ ಸಾರಥಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಗುಸುಗುಸು ಹರಡಿತ್ತು . ನಳಿನ್‌ಕುಮಾರ್‌ ಕಟೀಲ್‌ ಅವರು ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಿಲ್ಲ, ಹೀಗಾಗಿ ಈ ಚುನಾವಣಾ ಸೋಲಿನ ಹೊಣೆಯನ್ನು ರಾಜ್ಯಾಧ್ಯಕ್ಷರೇ ಹೊತ್ತುಕೊಳ್ಳಬೇಕು ಎಂದು ಇತರ ಕೆಲ ನಾಯಕರು ಆಗ್ರಹಿಸಿದ್ದಾರೆ.

ಮುಂದೆ ಪ್ರಬಲ ಸಮುದಾಯಕ್ಕೆ ರಾಜ್ಯ ಘಟಕದ ಜವಾಬ್ದಾರಿ ಕೊಡುವ ಬಗ್ಗೆ ಚರ್ಚೆ ನಡೆದಿತ್ತು . ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ, ಆದಷ್ಟು ಬೇಗನೆ ಅಧ್ಯಕ್ಷರನ್ನು ಬದಲಿಸುವಂತೆ ಕಾರ್ಯಕರ್ತರ ವಲಯದಲ್ಲಿ ಆಗ್ರಹ ಕೇಳಿಬಂದಿದೆ. ಈ ನಡುವೆ ರಾಜ್ಯಾಧ್ಯಕ್ಷರ ಹುದ್ದೆಗೆ ಸಾಲು ಸಾಲು ನಾಯಕರ ಪೈಪೋಟಿಯಿತ್ತು . ಬಿ.ವೈ ವಿಜಯೇಂದ್ರ, ಶೋಭಾ ಕರಂದ್ಲಾಜೆ, ಅಶ್ವಥ್ ನಾರಾಯಣ, ಸುನಿಲ್ ಕುಮಾರ್ ಸೇರಿದಂತೆ ಹಲವರ ಹೆಸರು ಕೆಳೆಬಂದಿತ್ತು ಕೊನೆಗೂ ಬಿ ವೈ ವಿಜಯೇಂದ್ರ ರನ್ನು ಬಿ ಜೆ ಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular