ಮಂಗಳೂರು : ತುಳು ಸಿನಮಾವೊಂದು ಒಂದೇ ದಿನದಲ್ಲಿ ಅದೂ ಪ್ರೀಮಿಯರ್ ಶೋದಲ್ಲೇ ಒಂದು ಕೋಟಿ ಗಳಿಸಲು ಸಾಧ್ಯನಾ ? ಇಂತಹ ಒಂದು ಹಸಿ ಹಸಿ ಸುಳ್ಳನ್ನು ರಿಲೀಸ್ ಗೂ ಮೊದಲೇ ಹರಿ ಬಿಟ್ಟಿದ್ದು ಯಾಕೆ ಅನ್ನೋದು ಯಕ್ಷ ಪ್ರಶ್ನೆ.
ತುಳು ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದ್ದ ಚಾಲಿಪೋಲಿಲು ಸಿನೆಮಾ ಕೂಡಾ ಒಂದು ದಿನದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿಲ್ಲ. ಆದ್ರೆ ಅಸ್ತ್ರ ಗ್ರೂಪ್ ನಿರ್ಮಾಣದ ಮೊದಲ ಚಿತ್ರ ‘ಮೀರಾ’ ಒಂದು ಕೋಟಿ ಗಳಿಸಿದ್ದಾಗಿ ಹೇಳಿಕೊಂಡಿರುವುದು ಅಚ್ಚರಿ ತಂದಿದೆ. ಸೀಮಿತ ಪ್ರೇಕ್ಷಕ ವರ್ಗವನ್ನು ಹೊಂದಿರುವ ತುಳು ಚಿತ್ರರಂಗದಲ್ಲಿ ಇದುವರೆಗೆ ಬಂದ ಬಿಗ್ ಬಜೆಟ್ ಸಿನೆಮಾ ಅಂದ್ರೆ ಅದು ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ , ಚಿತ್ರ ತೆರೆಕಾಣುವ ಮೊದಲು ಐವತ್ತು ಲಕ್ಷದಷ್ಟು ಹಣ ಬಾಚಿಕೊಂಡಿತ್ತು ಎಂದು ಹೇಳಲಾಗಿತ್ತು.
ವಿದೇಶದಲ್ಲಿ ನಡೆದ ಪ್ರೀಮಿಯರ್ ಶೋ ಹಾಗೂ ಬೇರೆ ಬೇರೆ ಮಾರ್ಕೆಟಿಂಗ್ ತಂತ್ರಗಾರಿಕೆಯ ಮೂಲಕ ಇದು ಸಾಧ್ಯವಾಗಿತ್ತು . ಆದ್ರೆ ಮೀರಾ ಸಿನೆಮಾ ಒಂದು ಕೋಟಿ ಗಳಿಸಿದೆ ಎಂದು ಹೇಳುವ ಮೂಲಕ ತುಳು ಸಿನೆಮಾ ಇಂಡಸ್ಟ್ರಿಯ ದಾರಿ ತಪ್ಪಿಸುವ ಕೆಲಸವನ್ನು ಅಸ್ತ್ರ ಗ್ರೂಪ್ ಮಾಡ್ತಾ ಇದೆ ಎಂಬ ಅನುಮಾನ ಮೂಡಿದೆ. ಸಿನೆಮಾ ಚೆನ್ನಾಗಿದೆ ಅಂತ ಬಹಳಷ್ಟು ಜನ ಕಲಾವಿದರು ಹೇಳಿದ್ದಾರೆಯಾದ್ರೂ ಒಂದು ಕೋಟಿ ಕಲೆಕ್ಷನ್ ಹೇಗೆ ಸಾಧ್ಯ ಎಂಬ ಬಗ್ಗೆ ಯಾರೂ ಮಾತನಾಡಿಲ್ಲ. ಲೋ ಬಜೆಟ್ ಸಿನೆಮಾವೊಂದನ್ನು ಈ ರೀತಿಯಾಗಿ ಪ್ರಮೋಟ್ ಮಾಡುವ ಕಾರಣ ತುಳು ಸಿನೆಮಾಗೆ ಹಣ ಸುರಿದು ನಿರ್ಮಾಪಕರು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಬರಬಹುದು. ಒಂದು ಕೋಟಿ ಗಳಿಸಬೇಕು ಅಂದ್ರೆ 10 ಸಾವಿರ ಜನ ಈ ಸಿನೆಮಾವನ್ನು 1000.00 ರೂಪಾಯಿ ಕೊಟ್ಟು ನೋಡಿರಬೇಕು. 10 ಸಾವಿರ ಜನ ನೋಡಬೇಕು ಅಂದ್ರೆ 300 ಸೀಟ್ ಇರುವ ಚಿತ್ರ ಮಂದಿರದಲ್ಲಿ 35 ಪ್ರೀಮಿಯರ್ ಶೋ ಆದ್ರೂ ಆಗಲೇ ಬೇಕು. ಇಲ್ಲಾ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಬಿಲ್ಡರ್ ಸಹಾಯ ಪಡೆದುಕೊಂಡಂತೆ ಸ್ಪಾನ್ಸರ್ ಆದ್ರೂ ಯಾರಾದ್ರೂ ಇರಬೇಕು . ಅದ್ಯಾವುದೂ ಇಲ್ಲದೆ ಒಂದು ಕೋಟಿ ಗಳಿಕೆ ಎಂಬುದರ ಸತ್ಯಾಸತ್ಯತೆ ಏನು ಅನ್ನೋದು ತುಳು ಸಿನೆಮವನ್ನು ಬೆಳೆಸುವ ಪ್ರೇಕ್ಷಕ ವರ್ಗಕ್ಕೆ ಗೊತ್ತಾಗಬೇಕಾಗಿದೆ.
ಸಿನೆಮಾ ನೋಡಲು ಬಂದವರು ಪರೋಕ್ಷವಾಗಿ ನೀಡುವ ಹಣವನ್ನು ಸಿನೆಮಾ ಕಲೆಕ್ಷನ್ ಲೆಕ್ಕದಲ್ಲಿ ಸೇರಿಸಿಕೊಂಡಿದ್ರೂ ಅದನ್ನು ಒಂದೇ ದಿನದ ಗಳಿಕೆ ಅಂತ ಹೇಳುವುದು ಹಾಸ್ಯಾಸ್ಪದ. ಅಸ್ತ್ರ ಗ್ರೂಪಿನ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚಗಳು ನಡಿತಾ ಇದೆ. ತುಳುನಾಡಿನ ಜನರಿಗೆ ಕಿವಿಗೆ ಹೂವು ಇಡುವ ಕೆಲಸವನ್ನು ಲಂಚುಲಾಲ್ ಮಾಡ್ತಾ ಇದ್ದಾರಾ ಅನ್ನೋ ಪ್ರಶ್ನೆಗಳು ಕೂಡಾ ಎಳತೊಡಗಿದೆ. ಇದೆಲ್ಲದಕ್ಕೂ ಲಂಚೂಲಾಲ್ ಉತ್ತರಿಸಬೇಕಾಗಿದೆ.