Friday, March 13, 2026
Flats for sale
Homeಗ್ಯಾಜೆಟ್ / ಟೆಕ್ಬೆಂಗಳೂರು : ರಿಲಯನ್ಸ್ ಡಿಜಿಟಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌!

ಬೆಂಗಳೂರು : ರಿಲಯನ್ಸ್ ಡಿಜಿಟಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌!

ಬೆಂಗಳೂರು : ಜನಪ್ರಿಯ ರಿಲಯನ್ಸ್ ಡಿಜಿಟಲ್ ಸಂಸ್ಥೆಯು ಇದೀಗ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ. ಸಂಸ್ಥೆಯು ತನ್ನ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಮಾರಾಟ ಮೇಳ ಎನಿಸಿರುವ ‘ಡಿಜಿಟಲ್ ಡಿಸ್ಕೌಂಟ್ ಡೇಸ್’ ಅನ್ನು ಪ್ರಾರಂಭಿಸಿದೆ. ಈ ಮಾರಾಟ ಮೇಳದಲ್ಲಿ ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಯ ಕೊಡುಗೆಗಳು ಲಭ್ಯ ಆಗುತ್ತವೆ.

ಹೌದು, ರಿಲಯನ್ಸ್‌ ಡಿಜಿಟಲ್‌ ಇದೀಗ ಡಿಜಿಟಲ್ ಡಿಸ್ಕೌಂಟ್ ಡೇಸ್ ಸೇಲ್‌ ಮೇಳವನ್ನು ಆಯೋಜಿಸಿದೆ. ಈ ಮಾರಾಟದಲ್ಲಿ ವಿವಿಧ ಶ್ರೇಣಿಯ ಉತ್ಪನ್ನಗಳಿಗೆ ಬೊಂಬಾಟ್‌ ಡಿಸ್ಕೌಂಟ್‌ ಕೊಡುಗೆಗಳು ದೊರೆಯುತ್ತವೆ. ಅಂದಹಾಗೆ ಖರೀದಿದಾರರು ರಿಲಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಸ್ಟೋರ್‌ಗಳ ಮೂಲಕ ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು.

ಈ ಡಿಸ್ಕೌಂಟ್‌ ಮಾರಾಟದಲ್ಲಿ ಖರೀದಿದಾರರು ಪ್ರಮುಖ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇಕಡ 10% ಇನ್‌ಸ್ಟಂಟ್‌ ರಿಯಾಯಿತಿ ಪಡೆಯಬಹುದು ಅಥವಾ ಸಾಲಗಳ ಮೇಲೆ 15,000 ರೂ. ಕ್ಯಾಶ್‌ ಬ್ಯಾಕ್ ಪಡೆಯಬಹುದು. ಅಲ್ಲದೇ 15 ನೇ ಏಪ್ರಿಲ್ 2024 ರ ವರೆಗೆ ಖರೀದಿದಾರರು ತಮ್ಮ ನೆಚ್ಚಿನ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಆಕರ್ಷಕ ರಿಯಾಯಿತಿ ಸಹ ಪಡೆಯಬಹುದು.

ಇನ್ನು ರಿಲಯನ್ಸ್ ಡಿಜಿಟಲ್ ನೊಂದಿಗೆ ಹೊಂದಿಕೊಳ್ಳುವ ಇಎಂಐ ಆಯ್ಕೆಗಳೊಂದಿಗೆ ಸುಲಭವಾದ ಹಣಕಾಸಿನ ಸೌಲಭ್ಯದ ಆಯ್ಕೆ ಸಹ ಪಡೆಯಬಹುದಾಗಿದೆ. ಸ್ಮಾರ್ಟ್‌ ಟಿವಿಗಳಿಗೂ ಬಿಗ್‌ ರಿಯಾಯಿತಿ ಪ್ರಮುಖ ಬ್ರಾಡೆಂಡ್‌ ಕಂಪನಿಗಳ ಸ್ಮಾರ್ಟ್‌ ಟಿವಿಗಳ ಮೇಲೆ ಅತ್ಯುತ್ತಮ ರಿಯಾಯಿತಿ ಸೌಲಭ್ಯ ಇದೆ. LG OLED ಮತ್ತು ಸ್ಯಾಮ್‌ಸಂಗ್‌ ನಿಯೋ QLED ಟಿವಿ ಗಳ ಮೇಲೆ ಶೇಕಡ 45% ರಿಯಾಯಿತಿಯನ್ನು ಖರೀದಿದಾರರು ಪಡೆಯಿರಿ.

ಅಂದಹಾಗೆ ಈ ಸ್ಮಾರ್ಟ್ ಟಿವಿಗಳ ಬೆಲೆಯು 79,990ರೂ. ಗಳಿಂದ ಪ್ರಾರಂಭವಾಗುತ್ತದೆ. 43 ಇಂಚಿನ ಪೂರ್ಣ ಹೆಚ್‌ಡಿ ಸ್ಮಾರ್ಟ್‌ ಟಿವಿಗಳ ಮೇಲೆ ಶೇಕಡ 40% ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಇನ್ನು 43 ಇಂಚಿನ ಸರಣಿಯ ಟಿವಿಗಳು 16,990ರೂ. ಪ್ರೈಸ್‌ಟ್ಯಾಗ್‌ನಿಂದ ಪ್ರಾರಂಭವಾಗುತ್ತದೆ. ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶ ಇನ್ನು ನೂತನವಾಗಿ ಆಪಲ್ ಐಫೋನ್ ಖರೀದಿಸುವ ಆಲೋಚನೆ ಇದ್ದರೆ, ಅದಕ್ಕೆ ಈಗ ಸರಿಯಾದ ಸಮಯ ಬಂದಿದೆ ಎನ್ನಬಹುದು.

ರಿಲಯನ್ಸ್ ಡಿಜಿಟಲ್‌ನ ಈ ಮಾರಾಟ ಮೇಳದಲ್ಲಿ ಆಪಲ್‌ ಐಫೋನ್‌ ಗಳಗೆ 12,000ರೂ. ವರೆಗಿನ ಡಬಲ್ ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದಾಗಿದೆ. ಲ್ಯಾಪ್‌ಟಾಪ್, ಐಪ್ಯಾಡ್‌ಗಳಗೂ ಆಫರ್‌ ಆಪಲ್‌ ಮ್ಯಾಕ್‌ಬುಕ್‌ Supercharged, M1 ಡಿವೈಸ್‌ ಜೊತೆಗೆ ಶೇಕಡ 3% ರಷ್ಟು ರಿಯಾಯಿತಿ ಪಡೆಯಬಹುದು. ಹಾಗೆಯೇ ನೋಕಾಸ್ಟ್ ಇಎಮ್‌ಐ ದಿನಕ್ಕೆ ಕೇವಲ 54ರೂ. ರಿಂದ ಪ್ರಾರಂಭವಾಗುವ ಆಯ್ಕೆಗಳು ಇವೆ. ಗೇಮ್‌ ಪ್ರಿಯರಿಗಾಗಿ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಶ್ರೇಣಿಯು 49,999ರೂ. ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ.

ಇನ್ನು ಐಪ್ಯಾಡ್ 9th ಜೆನ್‌ ವೈ-ಫೈ 64GB ಯೊಂದಿಗೆ ಆಕರ್ಷಕ ರಿಯಾಯಿತಿ ಸಿಗಲಿದ್ದು, ಕೇವಲ 23,900ರೂ. ಉತ್ತಮ ಬೆಲೆಯಲ್ಲಿ. ಇನ್ನು ಡಾಲ್ಬಿ ಅಟ್ಮೋಸ್‌ ಸೌಂಡ್ ಬಾರ್‌ ಡಿವೈಸ್‌ಗಳ ಮೇಲೆ ಶೇಕಡ 65% ರಷ್ಟು ಅಧಿಕ ರಿಯಾಯಿತಿ ಪಡೆಯಬಹುದು. ಇನ್ನು ಇವು 17,990ರೂ.ಗಳ ವಿಶೇಷ ಬೆಲೆಯಿಂದ ಪ್ರಾರಂಭವಾಗುತ್ತದೆ. ಬೋಸ್ ಸೌಂಡ್‌ಬಾರ್ 900 ಮೇಲೆ ಶೇಕಡ 30 ರಿಯಾಯಿತಿಯ ಆಫರ್ ಇದ್ದು, ಇದರ ಬೆಲೆಯು 72,990ರೂ. ಆಗಿದೆ. ಹಾಗೆಯೇ 1 ಟನ್ 3-ಸ್ಟಾರ್ ಇನ್ವರ್ಟರ್ AC ಕೇವಲ 20,990ರೂ. ಗಳ ಬೆಲೆಯಲ್ಲಿ ಲಭ್ಯ. ಹೈ-ಎಂಡ್ 11 ಕೆಜಿ / 7 ಕೆಜಿ ವಾಷರ್ ಡ್ರೈಯರ್ ಬೆಲೆ ಕೇವಲ 61,990ರೂ. ಆಗಿದೆ. ಸೈಡ್ ಬೈ ಸೈಡ್ ರೆಫ್ರಿಜರೇಟರ್‌ ಡಿವೈಸ್‌ಗಳಿ ಆಕರ್ಷಕ ರಿಯಾಯಿತಿ ಪಡೆದಿದ್ದು, 49,990ರೂ. ರಿಂದ ಪ್ರಾರಂಭವಾಗುತ್ತದೆ. ಇನ್ನು ಎಲ್ಲಾ ಆಫರ್‌ಗಳು ಮತ್ತು ಬೆಲೆಗಳ ಮೇಲೆ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.

RELATED ARTICLES

LEAVE A REPLY

Please enter your comment!
Please enter your name here

Most Popular